ಕರ್ನಾಟಕಪ್ರಮುಖ ಸುದ್ದಿ

ಕೋವಿಡ್ ನಿರೋಧಕ ಲಸಿಕೆ ಪಡೆಯಲು ಹೆಸರು ನೋಂದಾಯಿಸಿ

ರಾಜ್ಯ(ಮಡಿಕೇರಿ) ಮೇ 22 :- ಮಡಿಕೇರಿ ತಾಲೂಕು ವ್ಯಾಪ್ತಿಯ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಎಲ್ಲಾ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನರು ಕೋವಿಡ್ 19 ಲಸಿಕೆ ಪಡೆಯಲು ಅನುಕೂಲವಾಗುವಂತೆ ನೋಂದಣಿ ಪ್ರಕ್ರಿಯೆಗಾಗಿ ನೋಂದಣಿ ಕೇಂದ್ರಗಳಾದ ಸಹಾಯಕ ನಿರ್ದೇಶಕರು(ಗ್ರೇಡ್-1) ಮಡಿಕೇರಿ 9480843155, 9449828936, 9663134091, ಭರಮಪ್ಪ ಪಾಶಾಗಾರ (ಶಿಕ್ಷಕರು) 9483825216 ಆಶ್ರಮ ಶಾಲೆ ಕರಿಕೆ, ಶಿವಣ್ಣ ಎನ್.ಪಿ (ಶಿಕ್ಷಕರು) 9008512597 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಪೆರಾಜೆ, ಸುಮಯ್ಯ ಕೆ.ಎಮ್. (ಶಿಕ್ಷಕರು) 9632434560 ವಸತಿ ಶಾಲೆ ಕಕ್ಕಬ್ಬೆ, ಕರುಂಬಯ್ಯ (ವಾರ್ಡ್‍ನ್) 7337784032 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಚೇರಂಬಾಣೆ ಕೇಂದ್ರಗಳನ್ನು ತೆರೆಯಲಾಗಿದೆ.
ನೋಂದಣಿ ಪ್ರಕ್ರಿಯೆಯು ಮೇ 24 ರಿಂದ ಪ್ರಾರಂಭವಾಗಲಿದ್ದು, ಕೋವಿಡ್ 19 ಲಸಿಕೆ ಪಡೆದುಕೊಳ್ಳದೇ ಇರುವವರು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಕೋವಿಡ್ 19 ಲಸಿಕೆಗೆ ಹತ್ತಿರದ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಸಂದರ್ಭದಲ್ಲಿ ತಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಪೋನ್ ಕಡ್ಡಾಯವಾಗಿರುತ್ತದೆ ಎಂದು ಮಡಿಕೇರಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: