
ದೇಶಪ್ರಮುಖ ಸುದ್ದಿ
`ಮೈನೆ ಪ್ಯಾರ್ ಕಿಯಾ’ ಚಿತ್ರದ ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್ ನಿಧನ
ನಾಗ್ಪುರ,ಮೇ 22-ಜನಪ್ರಿಯ ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್ (79) ಅವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ರಾಮ್ ಲಕ್ಷ್ಮಣ್ ಅವರು ಮಹಾರಾಷ್ಟ್ರದ ನಾಗ್ಪುರದ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ.
ರಾಮ್ ಲಕ್ಷ್ಮಣ್ರ ನಿಧನಕ್ಕೆ ಭಾರತದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರು ಸಂತಾಪ ಸೂಚಿಸಿದ್ದಾರೆ. ‘ಅತ್ಯಂತ್ಯ ಪ್ರತಿಭಾವಂತ ರಾಮ್ ಲಕ್ಷ್ಮಣ್ ಜಿ ನಿಧನ ಸುದ್ದಿ ಕೇಳಿ ನನಗೆ ಆಘಾತವಾಯಿತು. ಅವರ ಅನೇಕ ಹಾಡುಗಳನ್ನು ನಾನು ಹಾಡಿದ್ದೇನೆ. ಅವರಿಗೆ ನನ್ನ ನಮನಗಳು’ ಎಂದು ಟ್ವೀಟ್ ಮಾಡಿದ್ದಾರೆ.
1942ರ ಸೆಪ್ಟೆಂಬರ್ 16 ರಂದು ನಾಗ್ಪುರದಲ್ಲಿ ಜನಿಸಿದ್ದ ರಾಮ್ ಲಕ್ಷ್ಮಣ್(ವಿಜಯ್ ಪಾಟೀಲ್) ಅವರು `ಮೈನೆ ಪ್ಯಾರ್ ಕಿಯಾ, ಹಮ್ ಆಪ್ಕೆ ಹೈ ಕೌನ್, ಹಮ್ ಸಾಥ್ ಸಾಥ್ ಹೈ ಸೇರಿದಂತೆ ಹಿಂದಿ, ಮರಾಠಿ ಮತ್ತು ಭೋಜ್ಪುರಿಯ 150ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. (ಏಜೆನ್ಸೀಸ್, ಎಂ.ಎನ್)