ಕರ್ನಾಟಕಪ್ರಮುಖ ಸುದ್ದಿ

ಮಾಜಿ ಸಂಸದ ಎಚ್. ವಿಶ್ವನಾಥ್ ಜೆಡಿಎಸ್ ಸೇರಲಿದ್ದಾರೆ : ಎಚ್.ಡಿ.ಕೆ

ಸಿ.ಎಸ್.ಪುರ: ಮಾಜಿ ಸಂಸದ ಎಚ್.ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಜೆಡಿಎಸ್ ಸೇರಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸಿ.ಎಸ್.ಪುರದಲ್ಲಿ ಜೆಡಿಎಸ್ ಮಾತನಾಡುತ್ತಿದ್ದ ಅವರು, ಸಿದ್ದರಾಮಯ್ಯರನ್ನು ಕಾಂಗ್ರೆಸ್’ಗೆ ಕರೆತರುವಲ್ಲಿ ಪ್ರಮುಖರು. ಅಂತಹ ನಾಯಕನನ್ನ ಸಿದ್ದರಾಮಯ್ಯ‌ ನಡೆಸಿಕೊಳ್ಳುತ್ತಿರುವ ರೀತಿಯನ್ನ ನಾಡಿನ ಜನತೆ ಗಮನಿಸುತ್ತಿದ್ದಾರೆ. ಸಿಎಂ ನಡವಳಿಕೆಯಿಂದ ಕಾಂಗ್ರೆಸ್’ನ ಹಲವಾರು ಹಿರಿಯ ನಾಯಕರು ಬೇಸತ್ತಿದ್ದಾರೆ.

ವಿಶ್ವನಾಥ್ ನಮ್ಮೊಂದಿಗೆ ಚರ್ಚಿಸಿಲ್ಲ. ಆದರೆ ಮಾಧ್ಯಮಗಳ ವರದಿಯಿಂದ ವಿಚಾರ ತಿಳಿದಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲು ಜೆಡಿಎಸ್ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.

 

ಕಾರ್ಯಕ್ರಮಕ್ಕೆ ತೆರಳುವಲ್ಲಿ ವಿಳಂಬವಾದರೂ‌ ಸಹಸ್ರಾರು ಜನ ಕಾಯುತ್ತಿದ್ದಾರೆ. ನಾಡಿನ ಜನತೆ ಹಲವು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಕುಮಾರಸ್ವಾಮಿಗೂ ಒಮ್ಮೆ ಅಧಿಕಾರ‌ನೀಡಬೇಕೆಂದು ನಿರ್ಧರಿಸಿದ್ದಾರೆ. ಹೀಗಾಗಿ ನಾಡಿನ ಉದ್ದಗಲಕ್ಕೆ ಪ್ರವಾಸ ಮಾಡುತ್ತೇನೆ. ಪಕ್ಷವನ್ನ‌ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದರು.

ರೈತರ ಸಾಲ ಮನ್ನ ಖಚಿತ !

ಅಧಿಕಾರಕ್ಕೆ ಬಂದ ಮರು ಘಳಿಗೆಯಲ್ಲೇ ರೈತರ 53 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಸಿ.ಎಸ್‌.ಪುರ ಜೆಡಿಎಸ್ ಕಾರ್ಯಕರ್ತರ ಸಭೆಗೂ ಮುನ್ನ ಹೇಳಿಕೆ ನೀಡಿದ ಎಚ್.ಡಿ.ಕೆ, ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳುತ್ತೇನೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆ‌, ಕೃಷಿಯಲ್ಲಿ ಆಧುನಿಕತೆ ಅಳವಡಿಕೆ, ಕೃಷಿ ಸಾಲ ಸೌಲಭ್ಯ ನೀಡಲು ಕೃಷಿ ತಜ್ಞರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ರೈತರ ಹಿತವನ್ನ ಮರೆತಿವೆ ಎಂದರು.

ಅನ್ನದಾತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದರೂ ಟೀಕೆ-ಪ್ರತಿಟೀಕೆಯಲ್ಲಿ ತೊಡಗಿವೆ. ನೋಟ್ ಬ್ಯಾನ್ ಮಾಡಿ ರೈತರ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಹೊಸ ನೋಟು ಮುದ್ರಿಸಲು 30 ಸಾವಿರ ಕೋಟಿ ವ್ಯಯ ಮಾಡಿದ್ದಾರೆ. ಅದರ ಬದಲು ರಾಷ್ಟ್ರದ ಬಡ ಜನರಿಗೆ ನೆರವಾಗಬಹುದಿತ್ತು. ಕೇವಲ ಪ್ರಚಾರಕ್ಕೆ ಸೀಮಿತವಾಗಿರುವ ಮೋದಿ, ರೈತರ ಪರವಾದ ಯಾವುದೇ ಕಾರ್ಯಕ್ರಮ ನೀಡಿಲ್ಲ ವಾಗ್ದಾಳಿ ನಡೆಸಿದರು.

2022 ಕ್ಕೆ ರೈತರ ಹಣವನ್ನ‌ ದ್ವಿಗುಣಗೊಳಿಸಿತ್ತೇನೆ ಎಂದು ಹೇಳಿದ್ದಾರೆ. ಎಲ್ಲಿಂದ ದ್ವಿಗುಣಗೊಳಿಸುತ್ತಾರೆ? ವಿದೇಶಿ ಪ್ರವಾಸದಲ್ಲೇ ಕಾಲ ಕಳೆಯುತ್ತಿದ್ದಾರೆ. ಆಸ್ಟ್ರೆಲಿಯಾ ಪ್ರಧಾನಿಗೆ ರತ್ನಗಂಬಳಿ ಹಾಸಿ ಸ್ವಾಗತ ಕೋರಿದ ಪರಿಣಾಮ ಭಾರತೀಯ ಯುವಕರಿಗೆ ಆಸ್ಟ್ರೆಲಿಯಾದಲ್ಲಿ ಉದ್ಯೋಗಕ್ಕೆ ನಿರ್ಬಂಧ ಹೇರಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಆಡಳಿತ ಎಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ವಿರುದ್ದ ಟೀಕಿಸಿದರು.

(ಎಸ್.ಎನ್/ಎನ್.ಬಿ.ಎನ್)

Leave a Reply

comments

Related Articles

error: