ಸುದ್ದಿ ಸಂಕ್ಷಿಪ್ತ

ಅಲ್ಪಾವಧಿ ಕೋರ್ಸಗಳಿಗೆ ಅರ್ಜಿ ಆಹ್ವಾನ

ಮೈಸೂರು,ಮೇ.24:- ರಾಜ್ಯದಲ್ಲಿ ಹೆಚ್ಚುತ್ತಿರುವ ಕೋರೊನಾ ರೋಗವನ್ನು ನಿಯಂತ್ರಿಸುವ ಸಲುವಾಗಿ ಆರೋಗ್ಯ ವಲಯದಲ್ಲಿ ಹೆಚ್ಚಿನ ಪರಿಣಿತ ತಾಂತ್ರಿಕ ಸಹಾಯಕ ಸಿಬ್ಬಂದಿಯ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆ ಕೌಶಲ್ಯಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಸುಮಾರು ೩ ತಿಂಗಳ ಉಚಿತ ತರಬೇತಿಯನ್ನು ಅಲ್ಪಾವಧಿ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಿದೆ.
ಎಸ್.ಎಸ್.ಎಲ್.ಸಿ/೮ನೇ ತರಗತಿ ಓದಿದವರಿಗೆ ಜನರಲ್ ಡ್ಯೂಟಿ ಅಸಿಸ್ಟೆಂಟ್, ಜನರಲ್ ಡ್ಯೂಟಿ ಅಸಿಸ್ಟೆಂಟ್ ಅಡ್ವಾನ್ಸ್ಡ್(ಕಿಟಿಕಲ್ ಕೇರ್), ಹೋಂ ಹೆಲ್ತ್ ಏಡ್, ಪಿಯುಸಿ-ವಿಜ್ಞಾನ ಕೋರ್ಸ್ ಮುಗಿಸಿದವರಿಗೆ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್-ಬೇಸಿಕ್, ಲೆಬೊಟಾಮಿಸ್ಟ್, ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್ ಮತ್ತು ಎಸ್.ಎಸ್.ಎಲ್.ಸಿ/ಐಟಿಐ/ಡಿಪ್ಲೋಮಗಳಿಗೆ ಮೆಡಿಕಲ್ ಎಕ್ವಿಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ ತರಬೇತಿ ನೀಡಲಾಗುವುದು.
ತರಬೇತಿ ಪಡೆಯಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರವನ್ನು ಮೇ.31ರೊಳಗೆ [email protected] ಕಳುಹಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ:೦೮೨೧-೨೯೭೦೮೧೫, ಮೊ.ಸಂ.೯೮೪೪೪೯೧೫೨೨, ೯೪೪೮೨೦೮೪೪೮ ಸಂಪರ್ಕಿಸಿ ಎಂದು ಮೈಸೂರು ನಗರ ಜಿಲ್ಲಾ ಕೌಶಲ್ಯಭಿವೃದ್ಧಿ ಅಧಿಕಾರಿ ಎನ್.ಎಸ್.ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: