ದೇಶಪ್ರಮುಖ ಸುದ್ದಿ

ಯಾಸ್ ಚಂಡಮಾರುತದಿಂದ ಮೇ.24ರಿಂದ- 29ರ ವರೆಗೆ 25 ರೈಲು ಪ್ರಯಾಣ ರದ್ದು

ದೇಶ(ನವದೆಹಲಿ)ಮೇ.25:- ಕಳೆದವಾರ ತೌಕ್ತೆ ಚಂಡಮಾರುತ ಸೃಷ್ಟಿ ಮಾಡಿದ ಅನಾಹುತ ಹಾನಿ, ಜನರ ಮನಸ್ಸಿನಿಂದ ದೂರವಾಗುವ ಮುನ್ನವೇ ಮತ್ತೊಂದು ಚಂಡಮಾರುತದ ಭೀತಿ ದೇಶದಲ್ಲಿ ಎದುರಾಗಿದೆ.

ಯಾಸ್ ಚಂಡಮಾರುತದಿಂದಾಗಿ ಮೇ.24ರಿಂದ ಬರುವ 29ರ ವರೆಗೆ 25 ರೈಲು ಪ್ರಯಾಣ ರದ್ದು ಗೊಳಿಸಲಾಗಿದೆ ಎಂದು ಪೂರ್ವ ರೈಲ್ವೆ ಹೇಳಿದೆ. ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಕ್ಕೆ ನಂತರ ತೀವ್ರ ಚಂಡಮಾರುತವಾಗಿದೆ.
ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹವಾಮಾನ ಇಲಾಖೆಯ ಹೇಳಿದೆ.

ಯಾಸ್ ಚಂಡಮಾರುತ ಇದೇ 26 ರಂದು ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ಕರಾವಳಿಗಳನ್ನು ದಾಟಲಿದೆ. ಚಂಡಮಾರುತ ಗಾಳಿಯ ವೇಗವು ಗಂಟೆಗೆ ಸುಮಾರು 155-165 ಕಿ.ಮೀ. ಎಂದು ಐಎಂಡಿ ಊಹಿಸಿತ್ತು, ಇದು ಗಂಟೆಗೆ 185 ಕಿ.ಮೀ. ವೇಗದಲ್ಲಿ ಬೀಸಲಿದೆ.(ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: