ಮೈಸೂರು

ಶ್ರೀ ಸೇವಾ ನಿಕೇತನದಲ್ಲಿ ಆಶ್ರಯ ಪಡೆದಿರುವ ಅನಾಥ ರಿಗೆ ಅಗತ್ಯ ವಸ್ತು ವಿತರಣೆ

ಮೈಸೂರು,ಮೇ.25:- ಮೈಸೂರು ಕಾಂಗ್ರೆಸ್ ಪ್ರಚಾರ ಸಮಿತಿ ಮತ್ತು ಜನನಿ ಸೇವಾ ಟ್ರಸ್ಟ್ ವತಿಯಿಂದ ಇಂದು ವಿಜಯನಗರದಲ್ಲಿರುವ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶ್ರೀ ಸೇವಾ ನಿಕೇತನ  ಇಲ್ಲಿ ಆಶ್ರಯ ಪಡೆದಿರುವ ಅನಾಥರು, ನಿರ್ಗತಿಕರು, ಅಂಗವಿಕಲರಿಗೆ ಮಾಸ್ಕ್, ಮೊಟ್ಟೆ, ಬಾಳೆಹಣ್ಣು, ಬಿಸ್ಕೆಟ್ ಹಾಗೂ ಅಗತ್ಯವಸ್ತುಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಡಾ. ಎಂ.ಕೆ. ಅಶೋಕ. ಮಾತನಾಡಿ ಲಾಕ್ಡೌನ್ ನಿಂದ ಇಲ್ಲಿಯವರೆಗೆ ಕೊರೋನಾ ಸೋಂಕಿತರಿಗೆ ಉಚಿತವಾಗಿ ಆ್ಯಂಬುಲೆನ್ಸ್ ನಲ್ಲಿ ಅವರ ಮನೆಯಿಂದ ಅವರು ಹೇಳಿದ್ದ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವುದು ಮತ್ತು  ಅಗತ್ಯ ಔಷಧಿ ಗಳನ್ನು ಖರೀದಿಸಿ ಉಚಿತವಾಗಿ ಅವರ ಮನೆಗೆ ತಲುಪಿಸಿ ಔಷಧಿ ಹಣವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದು, ಈ ಸೇವೆ ಲಾಕ್ಡೌನ್ ಮುಗಿಯೋವರೆಗೂ ಮುಂದುವರೆಯುತ್ತದೆ ಎಂದರು.

ಈ ಸೇವೆಯನ್ನು ಕೊರೋನಾ ಸೋಂಕಿತರು, ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಈ ಸೇವೆಯನ್ನು ಪಡೆಯಲು ಮೊ.ಸಂ 9844145502, 9148602137 ಸಂಪರ್ಕಿಸಬಹುದು.  ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿಯ ಉಪಾಧ್ಯಕ್ಷರು, ಮಾಜಿ ನಿರ್ದೇಶಕರು ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಚೌಹಳ್ಳಿ ಪುಟ್ಸಾಮಿ, ಸಮಾಜಸೇವಕರಾದ  ಎಳನೀರುರಾಮಣ್ಣ, ಸತ್ಯಮೇವ್ ಜಯತೆ ಅಧ್ಯಕ್ಷ ಶ್ರೀನಿವಾಸ್ ರಾಕಿ, ಯುವ ಕಾಂಗ್ರೆಸ್ಸಿನ ನೇವಲ್ ಅಶೋಕ್, ಫಿಲಂ ಮಂಜು ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: