ಮೈಸೂರು

ರಂಗಭೂಮಿ ಕಲಾವಿದನನ್ನು ಬಲಿ ಪಡೆದ ಕೋವಿಡ್

ಮೈಸೂರು, ಮೇ.25:- ರಂಗಭೂಮಿ ಕಲಾವಿದ ರೋರ್ವರನ್ನು ಕೊರೊನಾ ಬಲಿ ಪಡೆದುಕೊಂಡಿದೆ.

ಮೈಸೂರಿನ ರಂಗಭೂಮಿ ಯುವ ಕಲಾವಿದ ವಿಕ್ರಮ್ (37) ಕೋವಿಡ್ ಗೆ ಬಲಿಯಾಗಿದ್ದಾರೆ. ಮಲೆಗಳಲ್ಲಿ ಮದುಮಗಳು ಹಾಗೂ ಇತರ ನಾಟಕಗಳಲ್ಲಿ ಅಭಿನಯಿಸಿದ್ದ ರು.  ಬನ್ನೂರಿನವರಾದ ಇವರು ನಾಟಕ ನಿರ್ದೇಶನ ಕೂಡ ಮಾಡುತ್ತಿದ್ದರು.

ಖಾಸಗಿ ವಾಹಿನಿ ಒಂದರಲ್ಲಿ ಪ್ರಸಾರವಾಗುತ್ತಿದ್ದ  ಮಜಾ ಭಾರತ  ಕಾರ್ಯಕ್ರಮ ದಲ್ಲಿ ಮೆಂಟರ್ ಆಗಿ ಕೆಲಸ ಮಾಡಿದ್ದ ಯುವ ರಂಗ ಶಿಕ್ಷಕ ರಾಗಿದ್ದರು. ಇವರ ತಂದೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಕ್ರಮ್    ಕೆಲ‌ವರ್ಷಗಳ‌ ಹಿಂದೆ ತಮ್ಮನನ್ನು   ಕಳೆದುಕೊಂಡಿದ್ದರು. ಇದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿ ದಿಕ್ಕು ತೋಚದಂತಾಗಿದ್ದಾರೆ. ಸೋಂಕು ತಗುಲಿ ನಾಲ್ಕು ದಿನವಾಗಿದ್ದರು ಹೆಚ್ಚಾಗಿ ಗಮನ ಹರಿಸದೆ ಸಾವು ತಂದುಕೊಂಡರು ಎನ್ನಲಾಗುತ್ತಿದೆ. ಇಂದು ಉಸಿರಾಟ ಸಮಸ್ಯೆ ಎಂದು ಕ್ಲಿನಿಕ್  ಗೆ ಹೋದ ಕೆಲವೇ ಗಂಟೆಯಲ್ಲಿ ವಿಕ್ರಮ್ ಸಾವನ್ನಪ್ಪಿದ್ದಾರೆ.

ಕೋವಿಡ್ ಗೆ ಕಲಾವಿದನ ಕುಟುಂಬ ನಲುಗಿ ಹೋಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: