ದೇಶಪ್ರಮುಖ ಸುದ್ದಿಮನರಂಜನೆ

ಪತ್ನಿ ಆತ್ಮಹತ್ಯೆ ಪ್ರಕರಣ : ಮಲಯಾಳಂ ನಟ ಉನ್ನಿ ದೇವ್ ಬಂಧನ

ದೇಶ(ತಿರುವನಂತಪುರಂ)ಮೇ.26:- ಮಲಯಾಳಂ ನಟ ಉನ್ನಿ ದೇವ್ ಅವರನ್ನು ಪತ್ನಿ ಪ್ರಿಯಾಂಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪತಿ ಉನ್ನಿದೇವ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಾರನೇ ದಿನ ಮೇ 12ರಂದು ಪ್ರಿಯಾಂಕ, ತನ್ನ ಮನೆಯ ಬೆಡ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಸ್ಥಳೀಯ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ಪ್ರಕರಣ ಸಂಬಂಧ ಎರ್ನಾಕುಲಂ ಜಿಲ್ಲೆಯ ಮನೆಯಲ್ಲಿದ್ದ ಉನ್ನಿದೇವ್ ಅವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಉನ್ನಿದೇವ್ ಅವರಿಗೆ ಕೋವಿಡ್- ಪಾಸಿಟಿವ್ ಇದ್ದ ಕಾರಣ ಸೋಂಕಿನಿಂದ ಗುಣಮುಖರಾಗಲು ಕಾಯುತ್ತಿದ್ದೇವು. ಆತನ ಮನೆಗೆ ಹೋಗಿ ಅಂಬ್ಯುಲೆನ್ಸ್ ನಲ್ಲಿ ಸಂಬಂಧಿತ ಆಸ್ಪತ್ರೆಗೆ ಕರೆದೊಯ್ದು ಸೋಂಕಿನ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ನಂತರ ಆತನನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಕೌಟುಂಬಿಕ ದೌರ್ಜನ್ಯ ಮತ್ತು ಹಣಕ್ಕಾಗಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆಗಾಗಿ ಉನ್ನಿದೇವ್ ವಿರುದ್ಧ ಮೃತ ಪ್ರಿಯಾಂಕಾಳ ಪೋಷಕರು ಕೂಡಾ ದೂರು ದಾಖಲಿಸಿದ್ದಾರೆ.2019ರಲ್ಲಿ ಮದುವೆಯಾದ ಆರಂಭದಲ್ಲಿ ಅವರಿಬ್ಬರು ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ತದನಂತರ ವರದಕ್ಷಣೆಗಾಗಿ ಉನ್ನಿದೇವ್ ಹಾಗೂ ಅವರ ಕುಟುಂಬಸ್ಥರು ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಪ್ರಿಯಾಂಕಾಳ ಕುಟುಂಬಸ್ಥರು ಆರೋಪಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: