ಮೈಸೂರು

ಮೈಸೂರಿನ ಸಿನಿಮಾ ಜೂನಿಯರ್ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

ಮೈಸೂರು,ಮೇ.26:- ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಲಾಕ್ ಡನ್  ವಿಸ್ತರಿಸಲಾಗಿದೆ. ಇದರಿಂದ ನಿಜಕ್ಕೂ ‌ಸಮಸ್ಯೆ ಎದುರಿಸುತ್ತಿರುವುದು ದಿನಗೂಲಿ ನೌಕರರು, ನಿರಾಶ್ರಿತರು , ನಿರ್ಗತಿಕರು, ಬಡಜನರು ಅದರಂತೆ ಕಲೆಯನ್ನೇ ನಂಬಿ ದಿನನಿತ್ಯದ ಬದುಕು ಸಾಗಿಸುತ್ತಿದ್ದ ಸಿನಿಮಾ ಕಾರ್ಮಿಕರು ಮತ್ತು ಕಲಾವಿದರು.

ಸಿನಿಮಾ ವನ್ನೇ ನಂಬಿ ಬದುಕುತ್ತಿರುವ ಅದೆಷ್ಟೋ ಕಾರ್ಮಿಕರು ಇಂದು ಅಕ್ಷರಶಃ ಪರದಾಡುವಂತಾಗಿದೆ. ಲಾಕ್ ಡೌನ್ ಮುಗಿಯುವವರೆಗೂ ಅವರಿಗೆ ಈ ತೊಂದರೆ ತಪ್ಪಿದ್ದಲ್ಲ.  ಇಂದು ಮೈಸೂರಿನ ಸಿನಿಮಾ ಜೂನಿಯರ್ ಕಲಾವಿದರಿಗೆ  ಹಿರಿಯ ನಟಿ ತಾರಾ ಅವರ ಕೋರಿಕೆಯಂತೆ  ಇಸ್ಕಾನ್ ಫೌಂಡೇಷನ್ ಅವರ ಸಹಕಾರದೊಂದಿಗೆ  ಸುಮಾರು ನೂರು ಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು .

ನಗರದ ಗನ್ ಹೌಸ್ ಶಂಕರ ಮಠದ ಪಕ್ಕದ ಕಲ್ಯಾಣ ಮಂಟಪದಲ್ಲಿ ಜೂನಿಯರ್ ಕಲಾವಿದರ ಸಂಘದ ಮೈಸೂರು ಶಿವು ಅವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಿಸಲಾಯಿತು.

ಮೈಸೂರು ಶಿವು ಅವರು ಮಾತನಾಡಿ ತಾರಾ ಅವರಿಗೆ ಧನ್ಯವಾದಗಳು, ನಮ್ಮ ಮೈಸೂರಿನಲ್ಲಿರುವ ಟೆಕ್ನಿಶಿಯನ್ ಗಳನ್ನು ನೆನಪಿಸಿಕೊಂಡು ಸಹಕಲಾವಿದರ ಸಹಕಾರದಿಂದ ಮೇಕಪ್ ಕಲಾವಿದರಿಗೂ ಕೂಡ ಮೇಕಪ್ ಕಲಾವಿದರಿಗೂ ಕೂಡ 15 ಮಂದಿ ಇದ್ದೇವೆ ಎಂದು ಕೇಳಿಕೊಂಡಾಗ ಕಷ್ಟನೋ, ಸುಖನೋ ಬೆಂಗಳೂರಿನಿಂದ ಕಿಟ್ ನ್ನು ತರಿಸಿ ಮೈಸೂರಿನಲ್ಲಿ ಕೊಡುತ್ತಿದ್ದಾರೆ. ಅವರು, ಅವರ ಕುಟುಂಬ ಚೆನ್ನಾಗಿರಲಿ ಅಂತ ಕೇಳಿಕೊಳ್ಳುತ್ತೇನೆ ಎಂದರು.

ಪುರುಷೋತ್ತಮ್ ಮಾತನಾಡಿ ತಾರಾ ಅವರಿಗೆ ಕಾಲ್ ಮಾಡಿದ್ದೆ. ಬೆಂಗಳೂರಿನಲ್ಲಿ ಕೊಡುತ್ತಿದ್ದೇವೆ. ಅದಾದ ನಂತರ ಮೈಸೂರಿಗೆ ಕೊಡುತ್ತೇವೆ ಎಂದರು. ನಿನ್ನೆಯೇ ಮೈಸೂರಿಗೆ ಕಳಿಸಿ ಇಂದು ವಿತರಣೆ ಮಾಡುತ್ತಿದ್ದಾರೆ. 100ಜನರಿಗೆ ಕಳಿಸಿಕೊಟ್ಟಿದ್ದಾರೆ. ಕಲಾವಿದರು, ಮೇಕಪ್ ಕಲಾವಿದರು, ತಂತ್ರಜ್ಞರು ಇವರುಗಳಿಗೂ ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಇಸ್ಕಾನ್ ಫೌಂಡೇಶನ್ ನ ಸದಸ್ಯರು , ಮೈಸೂರಿನ ಹಿರಿಯ ಸಿನಿಮಾ ಕಲಾವಿದರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: