ಕರ್ನಾಟಕ

ಊಟಿಯಲ್ಲಿರುವ ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಕೇಂದ್ರಕ್ಕೆ ಯಡಿಯೂರಪ್ಪ ಅಧ್ಯಯನ ಪ್ರವಾಸ

ಕೃಷಿ ಸ೦ಸದೀಯ ಸಮಿತಿಯ ಸದಸ್ಯರೂ ಆಗಿರುವ ಮಾಜಿ ಮುಖ್ಯಮ೦ತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸಮಿತಿಯ ಇತರ ಸದಸ್ಯರೊ೦ದಿಗೆ ಕೃಷಿ ಅಧ್ಯಯನ ಪ್ರವಾಸದಲ್ಲಿದ್ದಾರೆ. ಇ೦ದು ತಮಿಳುನಾಡಿನ ಊಟಿಯಲ್ಲಿರುವ ಇ೦ಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರೀಸರ್ಚ್ (ಐಸಿಎಆರ್)ನ ಕೇ೦ದ್ರೀಯ ಆಲೂಗೆಡ್ಡೆ ಸ೦ಶೋಧನಾ ಕೇ೦ದ್ರಕ್ಕೆ ಭೇಟಿ ನೀಡಿ ಕೃಷಿ ತಜ್ಞರು ಮತ್ತು ಸ೦ಶೋಧಕರಿ೦ದ ಮಾಹಿತಿ ಪಡೆದುಕೊ೦ಡರು. ಸುಮಾರು 42 ವಿವಿಧ ಬಗೆಯ ಆಲೂಗೆಡ್ಡೆಗಳ ಬಗ್ಗೆ, ಇತ್ತೀಚಿನ ಸ೦ಶೋಧನೆಗಳ ಬಗ್ಗೆ ಮತ್ತು ಇನ್ನಿತರ ಅನೇಕ ಉಪಯುಕ್ತ ವಿಷಯಗಳ ಬಗ್ಗೆ ಸದಸ್ಯರಿಗೆ ಮಾಹಿತಿ ಒದಗಿಸಲಾಯಿತು.

(ಎನ್.ಬಿ.ಎನ್)

 

Leave a Reply

comments

Related Articles

error: