ದೇಶಪ್ರಮುಖ ಸುದ್ದಿ

ಕೊರೊನಾ ಸೋಂಕಿತರಿಗಾಗಿ ‘ಆಕ್ಸಿಜನ್ ಪ್ಲಾಂಟ್ಸ್’ ಸ್ಥಾಪಿಸಿದ ನಟ ಚಿರಂಜೀವಿ

ಹೈದರಾಬಾದ್,ಮೇ 26-ಮೆಗಾಸ್ಟಾರ್ ಚಿರಂಜೀವಿ ಅವರು ಕೋವಿಡ್ ಸೋಂಕಿತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅವರ ಈ ಕಾರ್ಯಕ್ಕೆ ಪುತ್ರ ರಾಮ್ ಚರಣ್ ಕೂಡ ಕೈಜೋಡಿಸಿದ್ದಾರೆ.

ಆಂಧ್ರ ಪ್ರದೇಶದ ಮತ್ತು ತೆಲಂಗಾಣದ ಕೊರೊನಾ ರೋಗಿಗಳಿಗೆ ಅನುಕೂಲವಾಗಲೆಂದು ಆಕ್ಸಿಜನ್ ಪ್ಲಾಂಟ್ಸ್‌ ಸ್ಥಾಪಿಸಿದ್ದಾರೆ. ಈ ಎಲ್ಲ ವ್ಯವಸ್ಥೆಗಳ ಬಗ್ಗೆ ರಾಮ್ ಚರಣ್ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ.

ತೆಲಂಗಾಣದ ಖಮ್ಮಂ, ಕರೀಮ್‌ನಗರಗಳಲ್ಲೂ ಈ ಆಕ್ಸಿಜನ್ ಘಟಕಗಳು ಕಾರ್ಯಾರಂಭ ಮಾಡಿವೆ. ಶೀಘ್ರದಲ್ಲೇ ಅನಂತಪುರ, ಗುಂಟೂರು, ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ, ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಆಕ್ಸಿಜನ್ ಸಿಲಿಂಡರ್‌ಗಳು ಲಭ್ಯವಾಗಲಿದೆ.

‘ಆಕ್ಸಿಜನ್‌ ಸಮಸ್ಯೆಯಿಂದ ಯಾವೊಬ್ಬ ರೋಗಿಯೂ ನಿಧನರಾಗಬಾರದು ಎಂಬ ಉದ್ದೇಶ ನಮ್ಮದಾಗಿದೆ’ ಎಂದು ಚಿರಂಜೀವಿ ಹೇಳಿದ್ದಾರೆ. ನಮ್ಮ ಸಂಸ್ಥೆಯ ಕಣ್ಣು ಮತ್ತು ರಕ್ತ ನಿಧಿಗಳನ್ನೂ ಕೂಡ ರಾಮ್ ಚರಣ್‌ ಅವರೇ ನೋಡಿಕೊಳ್ಳುತ್ತಿದ್ದಾರೆ. ಆಕ್ಸಿಜನ್ ಸಿಲಿಂಡರ್‌ಗಳನ್ನು ಅಗತ್ಯಕ್ಕಂತೆ ವಿಲೇವಾರಿ ಮಾಡುವುದರ ಕುರಿತು ರಾಮ್ ಚರಣ್‌ ಉಸ್ತುವಾರಿ ವಹಿಸಿದ್ದಾರೆ’ ಎಂದಿದ್ದಾರೆ.

ಕೊರೊನಾ ಮೊದಲ ಅಲೆ ಬಂದಾಗಲೂ ಚಿರು ಇಷ್ಟೇ ಮುತುವರ್ಜಿ ವಹಿಸಿ, ಕೆಲಸ ಮಾಡಿದ್ದರು. ಒಂದು ಚಾರಿಟೇಬಲ್ ಟ್ರಸ್ಟ್‌ ಆರಂಭಿಸಿ, ತೆಲುಗು ಚಿತ್ರರಂಗ ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡಿದ್ದರು. ಈಗ ಆಕ್ಸಿಜನ್ ಬ್ಯಾಂಕ್ ಸ್ಥಾಪನೆ ಮಾಡಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: