ನಗರ ಕಾರ್ಯಕ್ರಮಸುದ್ದಿ ಸಂಕ್ಷಿಪ್ತ

ಅರ್ಜಿ ಸಲ್ಲಿಕೆಗೆ ಕಾಲಾವಕಾಶ

ರಾಜ್ಯ( ಮಡಿಕೇರಿ) ಮೇ 27:- ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ-3.0 ರಡಿಯಲ್ಲಿ ಆರೋಗ್ಯ ಸೇವೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಒಂದು ತಿಂಗಳವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ/ ಸಮುದಾಯ ಆರೋಗ್ಯ ಕೇಂದ್ರ/ ಸಾರ್ವಜನಿಕ ಆಸ್ಪತ್ರೆ/ ಜಿಲ್ಲಾಆಸ್ಪತ್ರೆಗಳಲ್ಲಿ ತರಬೇತಿ ಆಯೋಜಿಸಲಾಗಿದೆ.

ಆದ್ದರಿಂದ ಆಸಕ್ತಿ ಹೊಂದಿರುವ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ (ವಿಜ್ಞಾನ) ವಿದ್ಯಾರ್ಹತೆ ಹೊಂದಿರುವ  ಅರ್ಹ ಅಭ್ಯರ್ಥಿಗಳು ಮೇ 31 ರೊಳಗೆ https://tinyurl.com/2a56d7vr   ಗೂಗಲ್‍ಲಿಂಕ್ ಮೂಲಕ ಹಾಗೂ ತಮ್ಮ ಮೊಬೈಲ್ ಮೂಲಕ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತರಬೇತಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಸಿಬ್ಬಂದಿಗಳಾದ ಸುಧಾಕರ್ ಮೊ.ಸಂ:9741556036, ರವಿಕುಮಾರ್ ಮೊ.ಸಂ: 9738361502, ಹಾಗೂ ವೀರೇಶ್ ಜೆ.ಅಲ್ಲದ್ ಮೊ.ಸಂ:7204853876, ಹಾಗೂ ಕಚೇರಿಯ ಇ-ಮೇಲ್ ವಿಳಾಸ: [email protected]  ಅನ್ನು ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: