ದೇಶಪ್ರಮುಖ ಸುದ್ದಿ

ಮೇ 4 ರ ನಂತರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 14 ನೇ ಬಾರಿಗೆ ಏರಿಕೆ

ದೇಶ(ನವದೆಹಲಿ)ಮೇ.27:- ಈ ತಿಂಗಳ ಮೇ 4 ರ ನಂತರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 14 ನೇ ಬಾರಿಗೆ ಏರಿಕೆ ಕಂಡಿದೆ.

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 24 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 29 ಪೈಸೆ ಹೆಚ್ಚಾಗಿದೆ. ಹಿಂದಿನ ದಿನ ಯಾವುದೇ ಹೆಚ್ಚಳ ಕಂಡುಬಂದಿಲ್ಲ. ಇಂದು ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 93.68 ರೂ.ಗೆ ತಲುಪಿದೆ. ಒಂದು ಲೀಟರ್ ಡೀಸೆಲ್ ಬೆಲೆ 84.61 ರೂ.ಗೆ ತಲುಪಿದೆ. ಅದೇ ಸಮಯದಲ್ಲಿ, ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 100 ರೂಪಾಯಿಗಳನ್ನು ತಲುಪಿದೆ.

ಇಂಡಿಯನ್ ಆಯಿಲ್ ನ  ವೆಬ್‌ಸೈಟ್ ಪ್ರಕಾರ ಮುಂಬೈನಲ್ಲಿ ಇಂದು ಪೆಟ್ರೋಲ್ 99.94 ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 91.87 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 93.72 ಮತ್ತು ಡೀಸೆಲ್ 87.46 ರೂ ಮತ್ತು ಚೆನ್ನೈ ಪೆಟ್ರೋಲ್ 95.28 ರೂ ಮತ್ತು ಡೀಸೆಲ್ ಲೀಟರ್ ಗೆ 89.39 ರೂ. ಇದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: