ಕರ್ನಾಟಕಪ್ರಮುಖ ಸುದ್ದಿ

ಜಿಂದಾಲ್ ಗೆ ಭೂಮಿ ನೀಡುವ ನಿರ್ಧಾರಕ್ಕೆ ತಡೆ

ಬೆಂಗಳೂರು,ಮೇ 27-ಜಿಂದಾಲ್ ಸಂಸ್ಥೆಗೆ 3,667 ಎಕರೆ ಭೂಮಿ ನೀಡುವ ನಿರ್ಧಾರಕ್ಕೆ ತಡೆ ನೀಡಲು ಇಂದು ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಜಿಂದಾಲ್ ಸಂಸ್ಥೆಗೆ ಭೂಮಿ ನೀಡುವ ಕುರಿತಾಗಿ ಹಿಂದಿನ ಸಂಪುಟದಲ್ಲಿ ತೆಗೆದುಕೊಂಡಿದ್ದ ತೀರ್ಮಾನಕ್ಕೆ ಇಂದಿನ ಸಭೆಯಲ್ಲಿ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಭೂಮಿ ನೀಡುವ ನಿರ್ಧಾರಕ್ಕೆ ತಡೆ ಹಿಡಿಯಲಾಗಿದೆ.

ಈ ಕುರಿತಾಗಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈ ಸಂಬಂಧ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಹಿಂದಿನ ಸಂಪುಟದ ನಿರ್ಧಾರವನ್ನು ತಡೆಹಿಡಿಯಲು ಸಂಪುಟ ನಿರ್ಧರಿಸಿದೆ. ಆದರೆ ಭವಿಷ್ಯದಲ್ಲಿ ಈ ಬಗ್ಗೆ ಏನಾಗಲಿದೆ ಎಂಬುವುದು ತಿಳಿದಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಜಿಂದಾಲ್ ಗೆ ಭೂಮಿ ನೀಡಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸ್ವತಃ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿತ್ತು.

ಮೇಕೆದಾಟು ಎನ್ ಜಿಟಿ ಆದೇಶ ಪ್ರಶ್ನಿಸಲು ಸೂಚನೆಮೇಕೆದಾಟು ಯೋಜನೆ ಸಂಬಂಧ ಎನ್‌ಜಿಟಿ ಸಮಿತಿ ರಚಿಸಿರುವ ಆದೇಶವನ್ನು ಪ್ರಶ್ನಿಸಿ ಎನ್ ಜಿಟಿಯಲ್ಲೇ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.

ಈ ಸಂಬಂಧ ಸಿಎಂ‌ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ. ಜಲಸಂಪನ್ಮೂಲ ಅಧಿಕಾರಿಗಳು, ಕಾನೂನು ತಜ್ಞರ ಜೊತೆ ಸಭೆ ನಡೆಸಲಾಗಿದೆ‌. ಈ ಅದೇಶ ಸಮಂಜಸ ಅಲ್ಲ. ಮಾಧ್ಯಮಗಳ ವರದಿ ಆಧಾರದಲ್ಲಿ ಎನ್ ಜಿಟಿ ಈ ಆದೇಶವನ್ನು ನೀಡಿದೆ. ಈ ಆದೇಶವನ್ನು ಪ್ರಶ್ನಿಸಲಿದ್ದು, ಅದನ್ನು ವಾಪಸು‌ ಪಡೆಯಲು ಕೋರಲಿದ್ದೇವೆ ಎಂದರು.

ಸಂಪುಟ ಸಭೆಯ ಇತರ ನಿರ್ಣಯಗಳು:  ಪಶು ಸಂಗೋಪನೆ ಇಲಾಖೆಯಿಂದ ಪಿಪಿಪಿ ಮಾದರಿಯಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ಹಾವೇರಿಯಲ್ಲಿ ಅಲ್ಟ್ರಾ ಪ್ಯಾಕೇಜ್ ಮಿಲ್ಕ್ ಪ್ರೊಡಕ್ಟ್ ಯುನಿಟ್ ಸ್ಥಾಪನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಕೊಡಲಾಗಿದೆ.
ಕರ್ನಾಟಕ ಎಲೆಕ್ಟ್ರಿಕ್ ಎನರ್ಜಿ ಸ್ಟೋರೇಜ್ ಪಾಲಿಸಿ 15% ಬಂಡವಾಳ ಸಬ್ಸಿಡಿಯನ್ನು ಐದು ಕಂತುಗಳಲ್ಲಿ ನೀಡುವುದು ಹಾಗೂ ಇದನ್ನು ಗರಿಷ್ಠ 50 ಎಕರೆ ಸ್ಥಿರಾಸ್ತಿಗೆ ನಿಗದಿಪಡಿಸಲು ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ. ಕಂದಾಯ ಇಲಾಖೆಯಲ್ಲಿ 18.07 ಎಕರೆ ಆದಿನಾರಾಯಣ ಹಳ್ಳಿ ದೊಡ್ಡಬಳ್ಳಾಪುರದಲ್ಲಿ ಹೋಂಡಾ ಆಕ್ಟಿವ್ ಕಂಪನಿಗೆ ಗೋಮಾಳ ಜಮೀನು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಆದಿ ಚುಂಚನಗಿರಿ ಮಠಕ್ಕೆ ಜಮೀನು ನೀಡಲು ಹಿಂದಿನ ಸಂಪುಟದಲ್ಲಿ ತೀರ್ಮಾನವಾಗಿತ್ತು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮಸ್ಕಿ, ಇಂಡಿ, ಚಡಚಣ, ಕೊಲ್ಹಾರ್ ಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ತನಿಖೆಗೆ ಸಂಪುಟ ಸಭೆಯಲ್ಲಿ ಅವಕಾಶ ನೀಡಲಾಗಿಲ್ಲ. ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆಯಾಗಿತ್ತು. ರಾಜ್ಯಪಾಲರೂ ಇದನ್ನು ತಿರಸ್ಕರಿಸಿದ್ದರು. ಸೆಕ್ರೆಟರಿ ಎಕ್ಸಾಮಿನೇಷನ್ ಅಥಾರಿಟಿ ಇರುತ್ತಾರೆ. ಅದಕ್ಕಾಗಿ ಈ ಪ್ರಸ್ತಾಪ ಕೈ ಬಿಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿ ಮಕ್ಕಳ ವಾರ್ಡ್ ಆರಂಭಿಸುವುದು. ಆಕ್ಸಿಜನ್ ಪ್ರಮಾಣ ಹೆಚ್ಚಳ ಮಾಡಲು ಕ್ರಮ ಸೇರಿದಂತೆ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು. (ಎಂ.ಎನ್)

 

Leave a Reply

comments

Related Articles

error: