ಮೈಸೂರು

ನಾಳೆಯಿಂದ ಹತ್ತು ದಿನ ಮೈಸೂರು ಸಂಪೂರ್ಣ ಲಾಕ್ ಡೌನ್

ಮೈಸೂರು,ಮೇ.28:- ಮೈಸೂರು ಕೊರೊನಾ ಸೋಂಕು ನಿಯಂತ್ರಣ ಉದ್ದೇಶದಿಂದ ಮೈಸೂರು ನಗರ ಸೇರಿದಂತೆ ನಾಳೆಯಿಂದ ಜೂನ್ ಹತ್ತರವರೆಗೆ ಹತ್ತುದಿನಗಳ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಜಾರಿಗೆ ಆದೇಶಿಸಲಾಗಿದೆ.

ಮೈಸೂರು ನಗರದಲ್ಲಿ ನಾಳೆಯಿಂದ ಹತ್ತುದಿನ ಲಾಕ್ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಆದೇಶ ಇದ್ದರೂ ಹೋಟೆಲ್ಗಳಲ್ಲಿ ರೆಸ್ಟೋರೆಂಟ್ಗಳಲ್ಲಿ ಆಹಾರ ಪಾರ್ಸೆಲ್ ಹಾಗೂ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮುಂದುವರಿಯಲಿದೆ. ಪತ್ರಿಕೆ ವಿತರಣೆಗೆ ಯಾವುದೇ ಅಡ್ಡಿಯಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸ್ಪಷ್ಟಪಡಿಸಿದ್ದಾರೆ.

ಹಾಲಿನ ಬೂತ್, ವೈದ್ಯಕೀಯ ಸೇವೆ, ಹಾಪ್ಕಾಮ್ಸ್ ತರಕಾರಿ-ಹಣ್ಣಿನ ಮಳಿಗೆ, ನ್ಯಾಯಬೆಲೆ ಅಂಗಡಿಗಳಿಗೆ ಅಷ್ಟೇ ಅವಕಾಶ ಮಾಡಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: