ಕರ್ನಾಟಕಕ್ರೀಡೆಪ್ರಮುಖ ಸುದ್ದಿ

ಕೆಪಿಎಲ್ ಟಿ-20: ಸೆಮಿಫೈನಲ್‍ಗೆ ಹುಬ್ಬಳ್ಳಿ ಟೈಗರ್ಸ್ ಲಗ್ಗೆ

ಹುಬ್ಬಳ್ಳಿ: ಸೆ.30ರಂದು ನಡೆದ ಟಿ-20 ಕೆ.ಪಿ.ಎಲ್ ಕ್ರಿಕೆಟ್ ಪಂದ್ಯದದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ರಾಕ್ ಸ್ಟಾರ್ಸ್ ತಂಡವನ್ನು ಪರಾಭವಗೊಳಿಸುವ ಮೂಲಕ ರಾಕ್ ಸ್ಟಾರ್ಸ್ ತಂಡವೂ ಕಾರ್ಬನ್ 5ನೇ ಆವೃತ್ತಿಯ ಕೆ.ಪಿ.ಎಲ್ ಟಿ-20ಯಿಂದ ನಿರ್ಗಮಿಸಿದ್ದು ಈ ಗೆಲುವಿನಿಂದ ಹುಬ್ಬಳ್ಳಿ ಟೈಗರ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿತು.

ಸೈಕಲ್ ಪ್ಯೂರ್ ಅಗರಬತ್ತಿ ಕಾರ್ಬನ್ ಕೆಪಿಎಲ್ ಟಿ-20 ಟೂರ್ನಮೆಂಟ್ ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಶುಕ್ರವಾರದಂದು ನಡೆದ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ  85 ರನ್ ಗಳ ವಿಜಯದೊಂದಿಗೆ ಮೊದಲು ಸೆಮಿಫೈನಲ್ ಪ್ರವೇಶ ಮಾಡಿತು. ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವು ಬಳ್ಳಾರಿ ಟಸ್ಕರ್ಸ್ ತಂಡದೊಂದಿಗೆ ಸೆಣಸಾಡಲಿದೆ.

ರಾಕ್ ಸ್ಟಾರ್ಸ್ ತಂಡವು 18 ಓವರ್‍ಗಳಲ್ಲಿ 185 ರನ್ ಗಳ ಟಾರ್ಗೆಟ್ ನೀಡಿತು. ತಂಡದ ಆಟಗಾರ ವಿಹಾನ್ ರಾಜೀವ್ 3 ಸಿಕ್ಸರ್ಸ್, 2 ಬೌಂಡರಿಯಿಂದ 31 ರನ್ ಗಳಿಸಿ ಅತ್ಯುತ್ತಮ ರನ್ ಕಲೆ ಹಾಕಿದರು. ಈ ಸಂದರ್ಭ ಬೌಲಿಂಗ್ ದಾಳಿಗೆ ಸುಲಭ ತುತ್ತಾಗಿ ವಿಕೆಟ್ ಒಪ್ಪಿಸಿದರು.

ಪಂದ್ಯದ ಆರಂಭಕ್ಕೆ ಮಳೆ ಅಡ್ಡಿಪಡಿಸಿತ್ತು. ಆರಂಭಿಕ ಆಟಗಾರ ಮೊಹ್ಮದ್ ತಾಹಾ 2 ಸಿಕ್ಸ್, 4 ಬೌಂಡರಿ ಮೂಲಕ 59 ರನ್ ಸಿಡಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 42 ಬಾಲ್ ಗೆ 72 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಕಾರ್ತಿಕ್ 33 ರನ್ ಹೊಡೆದರು. ಈ ಗೆಲುವಿನೊಂದಿಗೆ ಅಂಕಪಟ್ಟಿಲ್ಲಿ  ಹುಬ್ಬಳ್ಳಿ ಟೈಗರ್ಸ್ 10 ಅಂಕ ಗಳಿಸಿ ಉನ್ನತ ಸ್ಥಾನ ಪಡೆದರೆ ರಾಕ್ ಸ್ಟಾರ್ಸ್ ತಂಡ ಶೂನ್ಯದೊಂದಿಗೆ ಮರಳಿದೆ.

ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್ 18 ಓವರ್ ಗಳಿಗೆ 7 ವಿಕೆಟ್ ನಷ್ಟಕ್ಕೆ 184 ರನ್ ಗಳು (ಎಂ.ಡಿ. ತಾಹಾ-59, ಕಾರ್ತಿಕ್ ಕುಮಾರ್-33, ಕುನಾಲ್ ಕರ್ಪೂರ್ 27, ದಿಕ್ಷಾನ್ಷು ನೇಗಿ 24, ಅಕ್ಷಯ್ 3/37, ರಾಜು ಗೌಡ 2/26) ವಿಜೇತ ರಾಕ್ ಸ್ಟಾರ್ಸ್ 18 ಓವರ್ ಗಳಲ್ಲಿ 99 ರನ್, 5 ವಿಕೆಟ್ ನಷ್ಟಕ್ಕೆ (ವಿಹಾನ್ ರಾಜೀವ್ 31, ರಾಹುಲ್ 37) ಹುಬ್ಬಳ್ಳಿ ಟೈಗರ್ಸ್ 85 ರನ್ ಗಳಿಂದ ಜಯಗಳಿಸಿತು.

ಸೆಮಿಫೈನಲ್ 1: ಹುಬ್ಬಳ್ಳಿ ಟೈಗರ್ಸ್ Vs ಬೆಳಗಾವಿ ಪ್ಯಾಂಥರ್ಸ್

ಸೆಮಿಫೈನಲ್ 2: ಮೈಸೂರು ವಾರಿಯರ್ಸ್ Vs ಬಳ್ಳಾರಿ ಟಸ್ಕರ್ಸ್.

 

ತಂಡಪಂದ್ಯಗೆಲುವುಸೋಲುಟೈಎನ್.ಆರ್.ಪಿಟಿಎಸ್ಎನ್.ಆರ್.ಆರ್
ಮೈಸೂರು ವಾರಿಯರ್ಸ್(Q)7700014+1.764
ಹುಬ್ಬಳ್ಳಿ ಟೈಗರ್ಸ್(Q)7520010+0.791
ಬೆಳಗಾವಿ ಪ್ಯಾಂಥರ್ಸ್(Q)743008+0.827
ಬಳ್ಳಾರಿ ಟಸ್ಕರ್ಸ್(Q)743008+0.780
ಬಿಜಾಪುರ ಬುಲ್ಸ್733017+1.023
ನಮ್ಮ ಶಿವಮೊಗ್ಗ734006-0.781
ಮಂಗಳೂರು ಯುನೈಟೆಡ್715013-0.511
ರಾಕ್ ಸ್ಟಾರ್ಸ್707000-3.858

ಆರೇಂಜ್ ಕ್ಯಾಪ್: ಎಂ. ಅಗರ್ ವಾಲ್ (395 ರನ್).

ಪರ್ಫಲ್ ಕ್ಯಾಪ್: ಜೆ. ಸುಚೀತಾ (13 ವಿಕೆಟ್).

Leave a Reply

comments

Related Articles

error: