ಕರ್ನಾಟಕಪ್ರಮುಖ ಸುದ್ದಿ

ಜಿಲ್ಲಾಧಿಕಾರಿ ಭೇಟಿ :  ಪರಿಶೀಲನೆ

ರಾಜ್ಯ(ಮಡಿಕೇರಿ)ಮೇ.29:- ವಿರಾಜಪೇಟೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬಾಧಿತವಾಗುವ ಬೇತ್ರಿ, ತೋರ, ಕೊಂಡಗೇರಿ, ಹಾಲುಗುಂದ, ಕರಡಿಗೋಡು, ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ಇತ್ಯಾದಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಭೇಟಿ ಸಂದರ್ಭ ಆರಕ್ಷಕ ಅಧೀಕ್ಷಕರು, ಉಪವಿಭಾಗ ಅಧಿಕಾರಿಗಳು, ತಹಶೀಲ್ದಾರರು, ಕಾರ್ಯ ನಿರ್ವಹಣಾ ಅಧಿಕಾರಿಗಳು, ಪಂಚಾಯತಿ ಅಭಿವೃದ್ದಿ ಅಧಿಕಾರಿ ಮತ್ತು ಇತರೆ ಕಂದಾಯ ಸಿಬ್ಬಂದಿಗಳು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: