ಕರ್ನಾಟಕಪ್ರಮುಖ ಸುದ್ದಿ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ನಿಧನ

ಬೆಂಗಳೂರು,ಮೇ 29-ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು (83) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ತಿಪಟೂರು ರಘು ಅವರಿಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಇತ್ತು. ಇಂದು ಬೆಳಿಗ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಕೊನೆಯುಸಿರೆಳೆದಿದ್ದಾರೆ.

ಮೂಲತಃ ತುಮಕೂರು ಜಿಲ್ಲೆ ತಿಪಟೂರಿನವರಾದ ರಘು ಅವರು ಬಾಲ್ಯದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಹಲವು ನಾಟಕಗಳನ್ನು ಮಾಡಿದ್ದರು.

‘ನಾಗಪೂಜ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟ ತಿಪಟೂರು ರಘು ಅವರು ‘ಊರ್ವಸಿ’ ಸಿನಿಮಾಗೆ ಸ್ವತಂತ್ರ ನಿದೇರ್ಶಕರಾದರು. ಅಲ್ಲದೆ ಈ ಸಿನಿಮಾದ ನಿರ್ಮಾಪಕ ಕೂಡ ಇವರೇ ಆಗಿದ್ದರು.  1984ರಲ್ಲಿ ಬಿಡುಗಡೆ ಆದ ವಿಷ್ಣುವರ್ಧನ್ ಮತ್ತು ಶಂಕರನಾಗ್ ಅಭಿನಯದ ‘ಬೆಂಕಿ ಬಿರುಗಾಳಿ’, ನಾಗಕಾಳಭೈರ, ವೀಣೆ, ಬೆಟ್ಟದ ಕಳ್ಳ, ಸ್ವರ್ಣ ಮಹಲ್​ ರಹಸ್ಯ, ಆಕ್ರೋಶ, ಕಲ್ಲುವೀಣೆ ನುಡಿಯಿತು ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ನಿರ್ದೇಶನ ಮಾತ್ರವಲ್ಲದೆ ಹಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದರು.  (ಎಂ.ಎನ್)

Leave a Reply

comments

Related Articles

error: