ಕರ್ನಾಟಕಪ್ರಮುಖ ಸುದ್ದಿ

ರಾಷ್ಟ್ರಮಟ್ಟದ ಖಾದಿ ಉತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಷ್ಟ್ರಮಟ್ಟದ ಖಾದಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಚಾಲನೆ ನೀಡಿದರು.

ಬಳಿಕ ಮಳಿಗೆಗಳಿಗೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚೆಗಳನ್ನು ತೋರಿಸಪ್ಪಾ ಪಂಚೆ ಇದೆಯೇನಪ್ಪಾ, ಒಳ್ಳೆಯ ಕ್ವಾಲಿಟಿದು ಇದೆಯೇನಪ್ಪಾ ಎಂದು  ಕೇಳಿದರಲ್ಲದೇ ಐದು ಬಗೆಯ ಪಂಚೆಗಳನ್ನು ಪರೀಕ್ಷಿಸಿದರು. ಅಷ್ಟೇ ಅಲ್ಲದೇ ಸ್ಥಳದಲ್ಲೇ ಪಂಚೆಯುಟ್ಟು ಸರಿಯಿದೆಯೋ ಇಲ್ಲವೋ ಎಂದು ಪರೀಕ್ಷಿಸಿದರು. ಇದನ್ನೆಲ್ಲ ಪ್ಯಾಕ್ ಮಾಡಿ ಮಳಿಗೆಗಳನ್ನು ವೀಕ್ಷಿಸಿ ಬರುತ್ತೇನೆ ಎಂದು ತೆರಳಿ ವಾಪಸ್ ಪಂಚೆಯ ಮಳಿಗೆ ಬಳಿ ಬಂದು ಹಣ ನೀಡಲು ಮುಂದಾದಾಗ ಹಣ ನೀಡಿದ್ದಾರೆ ಸರ್ ಯಾರೋ ಹಣ ನೀಡಿ ಪಂಚೆ ತಗೊಂಡು ಹೋದರು ಎಂದರು.  4264 ರೂ. ಕೊಟ್ಟು  ಅವರ  ಆಯ್ಕೆಯ  ಪಂಚೆಗಳನ್ನು ಬೆಂಬಲಿಗರು ಹಣ ನೀಡಿ ಖರೀದಿಸಿದ್ದರು.

ಈಗ ರಾಜಕಾರಣಿಗಳೇ ಖಾದಿ ಧರಿಸುತ್ತಿಲ್ಲ. ಗಾಂಧೀಜಿಯವರ ಆದರ್ಶಗಳನ್ನು  ನಾವೆಲ್ಲರೂ ಪಾಲಿಸಬೇಕು ಎಂದರು. ಸಚಿವ ಕೆ.ಜೆ.ಜಾರ್ಜ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಮತ್ತಿತರರು ಉಪಸ್ಥಿತರಿದ್ದರು. ಖಾದಿ ಏ.24 ರಿಂದ ಮೇ.23ರವರೆಗೆ ನಡೆಯಲಿದೆ.(ಎಸ್.ಎಚ್)

Leave a Reply

comments

Related Articles

error: