ಕ್ರೀಡೆಪ್ರಮುಖ ಸುದ್ದಿ

ಕಂಚಿನ ಪದಕ ಖಚಿತ ಪಡಿಸಿದ ಭಾರತದ ಜೋಡಿ

ದೇಶ(ನವದೆಹಲಿ)ಮೇ.31:- ಟುನೀಶಿಯಾದಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಯೂತ್ ಸ್ಟಾರ್ ಸ್ಪರ್ಧಿಗಳ ಪಂದ್ಯಾವಳಿಯ ಅಂಡರ್ -19 ಬಾಲಕಿಯರ ಡಬಲ್ಸ್ ಸೆಮಿಫೈನಲ್ಸ್ ಪ್ರವೇಶಿಸಿದ ಭಾರತದ ಯುವ ಆಟಗಾರರಾದ ದಿವ್ಯಾ ಚಿತಾಲೆ ಮತ್ತು ಸ್ವಸ್ತಿಕಾ ಘೋಷ್ ದೇಶಕ್ಕೆ ಕನಿಷ್ಠ ಕಂಚಿನ ಪದಕ ಖಚಿತ ಪಡಿಸಿದ್ದಾರೆ. ಆಟಗಾರರಿಬ್ಬರೂ ಸಿಂಗಲ್ಸ್ ವಿಭಾಗದ ನಾಕೌಟ್ ಸುತ್ತಿನಲ್ಲಿ ಸ್ಥಾನ ಪಡೆದರು.

ಮಹಾರಾಷ್ಟ್ರದ ದಿವ್ಯಾ ಮತ್ತು ಸ್ವಸ್ತಿಕ ಮೊದಲ ಸುತ್ತಿನಲ್ಲಿ ಬೈ ಪಡೆದರು. ಮುಂದಿನ ಸುತ್ತಿನಲ್ಲಿ ಅವರು ಸ್ಥಳೀಯ ಜೋಡಿ ಫಡ್ವಾ ಗಾರ್ಸಿ ಮತ್ತು ಮರಮ್ ಜೋಗಾಲಮಿ ಅವರನ್ನು 11-5, 6-11, 11-9, 11-8 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಮುನ್ನಡೆದು, ಕನಿಷ್ಠ ಕಂಚಿನ ಪದಕವನ್ನು ಖಾತ್ರಿ ಪಡೆಸಿದರು. ಸೆಮಿಫೈನಲ್ಸ್ನಲ್ಲಿ ಭಾರತೀಯ ಜೋಡಿ ಜೆಕ್ ಗಣರಾಜ್ಯದ ಲಿಂಡಾ ಜಡೆರೊವಾ ಮತ್ತು ಕ್ರೊಯೇಷಿಯಾದ ಹನಾ ಅರಪೋವಿಕ್ ಅವರನ್ನು ಎದುರಿಸಲಿದೆ.

ಮುಂಬೈನ ದಿವ್ಯಾ ಮತ್ತು ಸ್ವಸ್ತಿಕಾ ಕೂಡ ಅಂಡರ್ 19 ಸಿಂಗಲ್ಸ್‌ನ ಪ್ರೀ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದರು. ಯುವ ರಾಷ್ಟ್ರೀಯ ಚಾಂಪಿಯನ್ ದಿವ್ಯಾ ಆರನೇ ಗುಂಪಿನಲ್ಲಿ 3-0ಯಿಂದ ದಾಖಲೆಯ ಗೆಲುವಿನೊಂದೊಗೆ 16ರ ಘಟ್ಟ ಪ್ರವೇಶಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: