ಮೈಸೂರು

ಜೈಲರ್ ಬಂಧನ

ವಿಚಾರಣಾಧೀನ ಖೈದಿಗೆ ಅಪರಾಧ ಕೃತ್ಯದಲ್ಲಿ ತೊಡಗಲು ಸಹಾಯ ಮಾಡಿದ ಆರೋಪದಲ್ಲಿ ನಂಜನಗೂಡು ಕಾರಾಗೃಹದ ಜೈಲರ್ ನ್ನು ಬಂಧಿಸಿದ್ದಾರೆ.

ಜೇಲರ್ ನ್ನು ಸಿ.ಜೆ.ರಘುಪತಿ ಎಂದು ಹೇಳಲಾಗಿದೆ. ಇವರು ಕೆ.ಆರ್.ಪೇಟೆ ವ್ಯಾಪಾರಿ ಗೋಪಾಲ್ ಸಿಂಗ್ ಅಪಹರಣದ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರು ಜೈಲರ್ ನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕೊಲೆ ಪ್ರಕರಣದಲ್ಲಿ  ನಂಜನಗೂಡು ಕಾರಾಗೃಹ ಸೇರಿದ್ದ ಕೆ.ಆರ್.ಪೇಟೆಯ ಕೆ.ಎಚ್.ಅರುಣ್ ಎಂಬಾತನಿಗೆ ಮೊಬೈಲ್ ಉಪಯೋಗಿಸಲು ಅವಕಾಶ ನೀಡಿದ ಹಾಗೂ ಅನಾರೋಗ್ಯದ ನೆಪದಲ್ಲಿ ಜೈಲಿನಿಂದ ಹೊರಗೆ ಬಿಟ್ಟ ಆರೋಪ ಇವರ ಮೇಲಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: