ಮೈಸೂರು

ಕಷ್ಟ ಕಾಲದಲ್ಲಿ ನೆರವಾಗುವುದು ಮಾನವ ಧರ್ಮ : ಡಿ ಟಿ ಪ್ರಕಾಶ್

ಮೈಸೂರು,ಜೂ.1:- ದೇಶ ಹಾಗೂ ರಾಜ್ಯ ದಲ್ಲಿ ಕೊರೋನಾ ರುದ್ರ ತಾಂಡವ ಮುಂದುವರಿದಿದ್ದು  ನಗರ ಮತ್ತು ಜಿಲ್ಲೆಯ ಜನ ತೀರಾ ಸಂಕಷ್ಟಕ್ಕೊಳಗಾಗಿದ್ದಾರೆ. ನಾಡಿನ  ಜನ ಕೊರೋನಾ ಹಿಮ್ಮೆಟ್ಟಿಸಲು  ಪಕ್ಷಭೇದ ಮರೆತು ಒಟ್ಟಾಗಿ ಹೋರಾಡುವಂತೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್  ಕರೆ ನೀಡಿದರು.

ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಅರ್ಚಕರ ಪುರೋಹಿತರ ಕುಟುಂಬ ವರ್ಗಕ್ಕೆ ಅಪೂರ್ವ ಸ್ನೇಹ ಬಳಗ ಮತ್ತು ಸುಮುಖ ಕನ್ಸಸ್ಟ್ರಕ್ಷನ್ ವತಿಯಿಂದ ಚಾಮುಂಡಿಪುರಂ ಅಪೂರ್ವ ಹೋಟೆಲ್ ಸಭಂಗಣದಲ್ಲಿ   ದಿನಸಿ ಕಿಟ್  ವಿತರಿಸಲಾಯಿತು.

ಬಳಿಕ ಮಾತನಾಡಿದ ಡಿ.ಟಿ.ಪ್ರಕಾಶ್  ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು  ನೆರವಾಗುವುದು ಮಾನವ ಧರ್ಮ ,ಉಳ್ಳವರು ಮನಸು ಬಿಚ್ಚಿ ಕೊರೋನಾ ರೋಗಿಗಳಿಗೆ ಬೇರೆ ಬೇರೆ ರೀತಿಯಿಂದ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭ  ಬ್ರಾಹ್ಮಣ ಸಂಘದ  ಕಾರ್ಯದರ್ಶಿ ಅಪೂರ್ವ ಸುರೇಶ್,ಸುಮುಖ  ಕನ್ ಸ್ಟ್ರಕ್ಷನ್  ಮಾಲೀಕರಾದ ಅರುಣ್ , ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ , ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಚಕ್ರಪಾಣಿ ,ನವೀನ್ ,ಚೇತನ್ ಕಾಂತರಾಜು   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: