ಕರ್ನಾಟಕಪ್ರಮುಖ ಸುದ್ದಿ

ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ: ಬಿ.ವೈ,ವಿಜಯೇಂದ್ರ ಸ್ಪಷ್ಟನೆ

ಬೆಂಗಳೂರು,ಜೂ.2-ನಾನು ದೆಹಲಿಗೆ ಹೋಗಿದ್ದು, ನನ್ನ ವೈಯಕ್ತಿಕ ಕೆಲಸಕ್ಕಾಗಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ವಿಜಯೇಂದ್ರ ಅವರು ದೆಹಲಿಗೆ ಭೇಟಿ ನೀಡಿದ್ದರಿಂದ ಹಲವು ಊಹಾ ಪೋಹಗಳು ಎದ್ದಿದ್ದವು. ಇದಕ್ಕೆಲ್ಲಾ ಇದೀಗ ಸ್ವತಃ ವಿಜಯೇಂದ್ರ ಅವರೇ ಸ್ಪಷ್ಟನೆ ನೀಡಿದ್ದಾರೆ.

ನಾನು ದೆಹಲಿಗೆ ಹೋಗಿದ್ದು ನನ್ನ ವೈಯಕ್ತಿಕ ಕೆಲಸಕ್ಕಾಗಿ, ಏತಕ್ಕಾಗಿ ಇಂತಹ ಸುದ್ದಿಗಳು ಸೃಷ್ಟಿಯಾಗುತ್ತವೋ ನನಗೆ ತಿಳಿದಿಲ್ಲ. ನನ್ನ ವಯಕ್ತಿಕ ಕೆಲಸಕ್ಕಾಗಿ ನಾನು ನಿರಂತರವಾಗಿ ದೆಹಲಿಗೆ ಹೋಗುತ್ತಿರುತ್ತೇನೆ. ನಾನು ದೆಹಲಿಗೆ ಹೋದಾಗಲೆಲ್ಲಾ ಪಕ್ಷದ ಮುಖಂಡರನ್ನು ಭೇಟಿ ಮಾಡುತ್ತೇನೆ ಎಂದು ಅರ್ಥವಲ್ಲ, ನಾನು ಯಾವ ನಾಯಕರ ಅಪಾಯಿಂಟ್ ಮೆಂಟ್ ಪಡೆದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ ವಿಜಯೇಂದ್ರ ಭೇಟಿಯನ್ನು ನಿರಾಕರಿಸಿದ್ದಾರೆ. ಕರ್ನಾಟಕ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ಯಾವ ಭೇಟಿ ಮತ್ತು ಚರ್ಚೆ ನಡೆದಿಲ್ಲ ಎಂಬುದನ್ನು ಇಬ್ಬರು ನಾಯಕರು ಹೇಳಿದ್ದಾರೆ. ಬುಧವಾರ ವಿಜಯೇಂದ್ರ ಮತ್ತೆ ದೆಹಲಿಗೆ ತೆರಳಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ. (ಎಂ.ಎನ್)

 

Leave a Reply

comments

Related Articles

error: