ಮೈಸೂರು

ಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ಹಿನ್ನೆಲೆ : ಮೇಯರ್ ಸ್ಥಾನಕ್ಕೆ ಜೂ.11ಕ್ಕೆ ಚುನಾವಣೆ

ಮೈಸೂರು,ಜೂ.2:-  ಮೈಸೂರು ಮಹಾನಗರ ಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಇದೀಗ ಮೇಯರ್ ಸ್ಥಾನಕ್ಕೆ ಜೂ.11ರಂದು ಚುನಾವಣೆ ನಿಗದಿಪಡಿಸಲಾಗಿದೆ.

ಈ ಸಂಬಂಧ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಜೊತೆ ಚರ್ಚೆ ನಡೆಸಿದ ಬಳಿಕ    ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಮಾಹಿತಿ ನೀಡಿ  ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಕಾರಣ ಮೇಯರ್ ಸ್ಥಾನಕ್ಕೆ ಜೂನ್ 11ರಂದು ಚುನಾವಣೆ ನಿಗದಿ ಮಾಡಿದ್ದೇವೆ. ಚುನಾವಣೆ ನಡೆಯುವರೆಗೂ ಉಪಮೇಯರ್‌ ಗೆ ಅಧಿಕಾರವಿರಲಿದೆ ಎಂದರು.

ನಿನ್ನೆ ರಾತ್ರಿ ನಮಗೆ ರುಕ್ಮಿಣಿ ಮಾದೇಗೌಡರ ಸದಸ್ಯ ರದ್ದು ಆದೇಶ ಬಂದಿದೆ.  ಅದಕ್ಕಾಗಿ ತಕ್ಷಣ ನಾವು ಪ್ರಾದೇಶಿಕ ಆಯಕರಿಗೆ ಪತ್ರ ಬರೆದಿದ್ದೆವು. ಇಂದು   ಪ್ರಾದೇಶಿಕ ಆಯುಕ್ತರು ಚರ್ಚೆಗೆ ಕರೆದಿದ್ದರು. ಇದೀಗ ಚರ್ಚೆ ಮಾಡಲಾಗಿದ್ದು, ಕಾಯ್ದೆಯಲ್ಲಿ ಮತ್ತೆ ಚುನಾವಣೆಗೆ ಅವಕಾಶ ಇದೆ ಎಂಬುದನ್ನು ಪರಿಶೀಲಿಸಿ ಜೂನ್ 11ರಂದು ಮೇಯರ್ ಚುನಾವಣೆಗೆ ದಿನಾಂಕ ನಿಗದಿ ಮಾಡಿದ್ದೇವೆ. ಚುನಾವಣೆಯಲ್ಲಿ ಕೊರೋನಾ ನಿಯಮಗಳನ್ನು ಪಾಲಿಸುತ್ತೇವೆ. ಎಲ್ಲರಿಗೂ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿ ಚುನಾವಣೆ ನಡೆಸುತ್ತೇವೆ ಎಂದು ಎಂದು  ಮಾಹಿತಿ ನೀಡಿದರು.
ಲಾಕ್ ಡೌನ್ ಮುಂದುವರೆದರೆ ಪ್ರಾದೇಶಿಕ ಆಯುಕ್ತರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು   ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: