ಮೈಸೂರು

1500ಮನೆಗಳಿಗೆ ದಿನಸಿ ಕಿಟ್,ಮಾಸ್ಕ್,ಸ್ಯಾನಿಟೈ ಸರ್ ವಿತರಿಸಿದ ಮ.ವಿ.ರಾಮ್ ಪ್ರಸಾದ್

ಮೈಸೂರು, ಜೂ.2:- ಇಂದು 55 ನೇ ವಾರ್ಡಿನಲ್ಲಿ 1500 ಮನೆಗಳಿಗೆ ದಿನಸಿ ಕಿಟ್ , ಮಾಸ್ಕ್ , ಸ್ಯಾನಿಟೈಸರ್ ಗಳನ್ನು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ವಿತರಿಸುವುದಕ್ಕೆ ನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ನಾಗರೀಕರು ಜಾಗೃತರಗಬೇಕು, ಮಾಸ್ಕ್ ಧರಿಸಿ ಅಂತರವನ್ನು ಕಾಯ್ದು ಕೊಳ್ಳಬೇಕು, ಬೇಜವಾಬ್ದಾರಿಯಾಗಿ ವರ್ತಿಸಬಾರದು. ನೆಗಡಿ, ಕೆಮ್ಮು, ಜ್ವರ ಬಂದರೆ ಕೂಡಲೇ ರೋಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು, ಕೋವಿಡ್ ಹರಡುವುದನ್ನು ತಪ್ಪಿಸಬಹುದು ಹಾಗೂ ಉಳ್ಳವರು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಬೇಕು ಯಾರಿಗೂ ಶಾಶ್ವತವಲ್ಲ ಈ ಬದುಕು ಎಂದೂ ತಿಳಿಸಿದರು

ಈ ಸಂದರ್ಭದಲ್ಲಿ ವಲಯ ಆಯುಕ್ತರಾದ ಇಂದ್ರಮ್ಮ, ರೆವೆನ್ಯೂ ಇನ್ಸ್ಪೆಕ್ಟರ್ ಉಮೇಶ್, ಹೆಲ್ತ್ ಇನ್ಸ್ಪೆಕ್ಟರ್ ಮಂಜು, ಮುಖಂಡರಾದ ಸಿ ಸಂದೀಪ್, ಮಂಜುನಾಥ್, ಶಿವಕುಮಾರ್, ಅದ್ವೈತ್ ಶ್ರೀವತ್ಸ , ರವಿ, ಪುಟ್ಟಪ್ಪ, ವೆಂಕಟೇಶ್, ಕೃಷ್ಣ ಮುಂತಾದವರು ಭಾಗವಹಿಸಿದ್ದರು. (ಜಿ.ಕೆ,ಎಸ್. ಎಚ್)

Leave a Reply

comments

Related Articles

error: