ಮೈಸೂರು

ಕೈತುಂಡರಿಸಿದ ರೀತಿಯಲ್ಲಿ ಮೃತದೇಹ ಪತ್ತೆ : ಕೊಲೆಶಂಕೆ?

ವ್ಯಕ್ತಿಯೋರ್ವರ  ಮೃತದೇಹ ಕೈ ತುಂಡರಿಸಿದ ಸ್ಥಿತಿಯಲ್ಲಿ ಮೈಸೂರು ಮಹಾರಾಜ ಕಾಲೇಜಿನ ಮೈದಾನದ  ಬಳಿ ಇರುವ ರೈಲ್ವೆ ಹಳಿಯ ಸಮೀಪ ಪತ್ತೆಯಾಗಿದ್ದು, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಶಂಕೆ ವ್ಯಕ್ತವಾಗಿದೆ.

ಕೈತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹವನ್ನು ಮೈಸೂರು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಉದ್ಯೋಗಿ  ಅರುಣ್(40) ಎಂದು ಗುರುತಿಸಲಾಗಿದೆ. ಇವರು ಮೂಲತಃ ಕೆ.ಆರ್.ನಗರದವರಾಗಿದ್ದು, ಮೈಸೂರಿನ  ವಿಜಯನಗರದಲ್ಲಿ ವಾಸವಾಗಿದ್ದರು. ಇವರ ಮೃತದೇಹ ರೈಲ್ವೆಹಳಿಯ ಬಳಿ ಪತ್ತೆಯಾಗಿದ್ದು, ತುಂಡರಿಸಿದ ಕೈ ಸ್ಥಳದಿಂದ ಒಂದೂವರೆ ಕಿ.ಮೀ ದೂರವಿರುವ ಮಹಿಳಾ ಹಾಸ್ಟೆಲ್ ಬಳಿ ಬಿದ್ದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು, ಸರಸ್ವತಿಪುರಂ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ರೈಲ್ವೆ ಇನ್ಸಪೆಕ್ಟರ್ ಅಶೋಕ್  ಮಾತನಾಡಿ ಮೇಲ್ನೋಟಕ್ಕೆ ಕೊಲೆಯಂತೆ ಕಾಣಿಸುತ್ತದೆಯಾದರೂ ಪೋಸ್ಟ್ ಮಾರ್ಟ್ಂ ನಡೆದು ಮರಣೋತ್ತರ ಪರೀಕ್ಷೆಯ ವರದಿ ಬಂದ  ಬಳಿಕವೇ ನಿಜಾಂಶ ತಿಳಿದುಬರಲಿದೆ. ಸ್ಥಳದಲ್ಲಿ ಮೊಬೈಲ್ ದೊರಕಿದೆ. ಅದರಲ್ಲಿ ಸಿಮ್ ಹಾಗೇ ಇದೆ. ಬ್ಯಾಟರಿ ತೆಗೆಯಲಾಗಿದೆ. ಆದರೆ ಸ್ಥಳದಲ್ಲಿ ಎಲ್ಲೂ ರಕ್ತದ ಕಲೆಗಳಿಲ್ಲ ಎಂದಿದ್ದಾರೆ.

ಸ್ಥಳದಲ್ಲಿದ್ದ ಸರಸ್ವತಿಪುರಂ ಠಾಣೆಯ ಇನ್ಸಪೆಕ್ಟರ್ ಪೂವಯ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: