ಕ್ರೀಡೆಪ್ರಮುಖ ಸುದ್ದಿ

ಸೌರವ್ ಗಂಗೂಲಿಯ 25 ವರ್ಷದ ದಾಖಲೆಯನ್ನು ಮುರಿದು ಲಾರ್ಡ್ಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದ ಕಾನ್ವೇ

ದೇಶ(ನವದೆಹಲಿ)ಜೂ.3:- ಕ್ರಿಕೆಟ್‌ ನ ಮಕ್ಕಾ ಎಂದು ಕರೆಯಲ್ಪಡುವ ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ 25 ವರ್ಷದ ದಾಖಲೆಯನ್ನು ಮುರಿಯಲಾಗಿದೆ. ಬುಧವಾರ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಡೆವೊನ್ ಕಾನ್ವೇ, ಮೊದಲ ಟೆಸ್ಟ್‌ ನಲ್ಲಿ ಲಾರ್ಡ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸೌರವ್ ಗಂಗೂಲಿ 1996 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಬಹಳ ವಿಶೇಷ ದಾಖಲೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲಿ ಸೌರವ್ ಗಂಗೂಲಿ ಇಂಗ್ಲೆಂಡ್ ವಿರುದ್ಧ 131 ರನ್ ಗಳಿಸಿದ್ದರು. ಚೊಚ್ಚಲ ಪಂದ್ಯದಲ್ಲಿ ಲಾರ್ಡ್ಸ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. 25 ವರ್ಷಗಳಿಂದ ಈ ದಾಖಲೆ ಸೌರವ್ ಗಂಗೂಲಿ ಹೆಸರಿನಲ್ಲಿ ಉಳಿದಿತ್ತು.
ಮೊದಲ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಸೀಮಿತ ಓವರ್‌ ಗಳ ಕ್ರಿಕೆಟ್‌ ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಕಾನ್ವೇಗೆ ಟೆಸ್ಟ್ ಕ್ರಿಕೆಟ್‌ ನಲ್ಲಿ ಅವಕಾಶ ನೀಡಿತು. ಕಾನ್ವೇ ತಂಡವನ್ನು ಕಠಿಣ ಸಂದರ್ಭಗಳಲ್ಲಿ ನಿಯಂತ್ರಣದಲ್ಲಿಟ್ಟುಕೊಂಡಿದ್ದಲ್ಲದೆ, ಮೊದಲ ದಿನದ ಆಟದ ಅಂತ್ಯದವರೆಗೂ 136 ರನ್‌ ಗಳಲ್ಲಿ ಅಜೇಯರಾಗಿ ಉಳಿದಿದ್ದರು. ಕಾನ್ವೇ 131 ರನ್‌ ಗಳ ಗಡಿ ದಾಟಿದ ಕೂಡಲೇ ಸೌರವ್ ಗಂಗೂಲಿಯವರ ಶ್ರೇಷ್ಠ ದಾಖಲೆಯನ್ನು ಮುರಿಯಲು ಸಾಧ್ಯವಾಯಿತು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: