ಮೈಸೂರು

ವಾಸವಾಂಬ ಫುಡ್ ನೀಡ್ಸ್ ವತಿಯಿಂದ 100 ಮಂದಿಗೆ ದಿನಸಿ ಕಿಟ್ ವಿತರಣೆ

ಮೈಸೂರು,ಜೂ.3:-  ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ನಾಗರೀಕರಿಗೆ ವಾರ್ಡ್ ನಂ 23ರ ಸುಬ್ಬರಾಯನಕೆರೆಯ ಬಡಾವಣೆ ದಿವಾನ್ಸ್ ರಸ್ತೆಯಲ್ಲಿರುವ ವಾಸವಾಂಬ ಫುಡ್ ನೀಡ್ಸ್ ವತಿಯಿಂದ 100 ಮಂದಿಗೆ   ದಿನಸಿ ಕಿಟ್ ವಿತರಿಸಲಾಯಿತು.

ಮೈಸೂರು ನಗರ ಸಂಚಾರಿ ವಿಭಾಗದ ಎಸಿಪಿ ಗಂಗಾಧರ್  ಅವರು ಮಾತನಾಡಿ ಲಾಕ್ ಡೌನ್ ನಿಯಾಮಾನುಸಾರ ಪ್ರತಿಯೊಬ್ಬರು ಮನೆಯಲ್ಲೇ ಇದ್ದರೇ ಕೋವಿಡ್ ನಿಯಂತ್ರಿಬಹುದು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು‌ ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎಂಎನ್. ನವೀನ್ ಕುಮಾರ್   ಮಾತನಾಡಿ ಸಾರ್ವಜನಿಕರು ಕಷ್ಟದಲ್ಲಿರುವ ಸಂದರ್ಭದಲ್ಲಿ ನೆರವಾಗುವುದು ಮಾನವೀಯತೆಯ ಗುಣ, ವಾಸವಾಂಬ ಪುಡ್ ನೀಡ್ಸ್ ಪುಡ್ ಕಿಟ್ ಬಡವರಿಗೆ ವಿತರಿಸುತ್ತಿರುವುದು ಶ್ಲಾಘನೀಯವಾದ ಕೆಲಸ ಎಂದರು.

ದೇವರಾಜ ಸಂಚಾರಿ ಠಾಣೆ ವೃತ್ತ ನಿರೀಕ್ಷಕರಾದ ಮುನಿಯಪ್ಪ, ವಾಸವಾಂಬ ಪುಡ್ ನೀಡ್ಸ್ ಮಾಲೀಕರಾದ ವೆಂಕಟೇಶ್ ಬಾಬು, ಸಮಾಜ ಸೇವಕರಾದ ಕಾಂತಿಲಾಲ್, ಮಂಜುನಾಥ್, ರವಿಚಂದ್ರ, ವಿಷ್ಣು, ನವೀನ್ ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: