ಪ್ರಮುಖ ಸುದ್ದಿವಿದೇಶ

ಚಿಲಿಯಲ್ಲಿ ಪ್ರಬಲ ಭೂಕಂಪನ : ಕರಾವಳಿ ತೀರದ ಜನರ ಸ್ಥಳಾಂತರಕ್ಕೆ ಸೂಚನೆ

ಸ್ಯಾಂಟಿಯಾಗೋ : ದಕ್ಷಿಣ ಅಮೆರಿಕ ಖಂಡದ ಪ್ರಮುಖ ರಾಷ್ಟ್ರವಾಗಿರುವ ಚಿಲಿಯಲ್ಲಿ ಮಂಗಳವಾರ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.9 ರಷ್ಟು ತೀವ್ರತೆ ದಾಖಲಾಗಿದ್ದು, ಕೇಂದ್ರ ಚಿಲಿಯ ವಲ್ಪರೈಸೊ ನಗರದ 38 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕ ಭೂಕಂಪನ ಮಾಪನ ಕೇಂದ್ರ ಮಾಹಿತಿ ನೀಡಿದೆ.

ಕರಾವಳಿ ತೀರಗಳಲ್ಲಿ ಭಾರಿ ಪ್ರಮಾಣದ ಅಲೆಗಳು ಏಳಲಿರುವ ಕಾರಣ ಮುಂಜಾಗ್ರತಾ ಕರಾವಳಿ ತೀರದ ನಿವಾಸಿಗಳು ಕೂಡಲೇ ಎತ್ತರದ ಪ್ರದೇಶಕ್ಕೆ ಹೋಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರೆಗೂ ಯಾವುದೇ ರೀತಿಯ ಸಾವುನೋವುಗಳಾದ ಕುರಿತ ವರದಿ ಬಂದಿಲ್ಲ. ಚಿಲಿಯಲ್ಲಿರುವ ಭೂಕಂಪನ ಪ್ರದೇಶ ರಿಂಗ್ ಆಫ್ ಫೈರ್ ವ್ಯಾಪ್ತಿಯಲ್ಲೇ ಈ ಭೂಕಂಪನ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸುನಾಮಿ ಭೀತಿ ಇಲ್ಲ :

2015ರ ಸೆಪ್ಟೆಂಬರ್’ನಲ್ಲಿ ಉತ್ತರ ಚಿಲಿಯಲ್ಲಿ ಸಂಭವಿಸಿದ 8.3ರಷ್ಟು ತೀವ್ರತೆಯ ಭಾರಿ ಭೂಕಂಪನದಿಂದಾಗಿ ಭೀಕರ ಸುನಾಮಿ ಅಲೆಗಳು ಎದ್ದು 15 ಮಂದಿ ಸಾವಿಗೀಡಾಗಿದ್ದರು. 2010ರಲ್ಲಿ ಸಂಭವಿಸಿದ್ದ 8.8ರಷ್ಟು ತೀವ್ರತೆ ಭೂಕಂಪನದಿಂದಾಗಿ 500 ಮಂದಿ ಸಾವಿಗೀಡಾಗಿದ್ದರು.

ಸದ್ಯದಲ್ಲಿ ಭಾರೀ ಭೂಕಂಪ ಸಂಭವಿಸಿದ್ದರೂ ಸುನಾಮಿಯಂತಹ ಭಾರೀ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇಲ್ಲ ಎಂದು ಭೂಗರ್ಭ ತಜ್ಞರು ಹೇಳಿದ್ದಾರೆ.

(ಎನ್.ಬಿ.ಎನ್)

Leave a Reply

comments

Related Articles

error: