ಮೈಸೂರು

ದಾನಿಗಳ ನೆರವಿನಿಂದ ಮಾನವೀಯ ಮೌಲ್ಯ ಹೆಚ್ಚುತ್ತಿದೆ : ಸುನೀಲ್

ಮೈಸೂರು, ಜೂ.3:-  ದಾನಿಗಳ ನೆರವಿನಿಂದ  ಮಾನವೀಯ ಮೌಲ್ಯ ಹೆಚ್ಚುತ್ತಿದೆ ಎಂದು ಕೆ ಆರ್  ಠಾಣೆಯ ಸಹಾಯಕ ವೃತ್ತ ನಿರೀಕ್ಷಕ ಸುನೀಲ್ ತಿಳಿಸಿದರು.

ಸಿದ್ಧಪ್ಪ ಸುಶೀಲಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ
ಗನ್ ಹೌಸ್ ವೃತ್ತದಲ್ಲಿ ಅಸಹಾಯಕರಿಗೆ ಸಿಹಿ ಊಟ
ಹಾಕಲಾಯಿತು .ಅನ್ನ, ಸಾಂಬಾರ್, ರಸಂ, ಮಜ್ಜಿಗೆ,ಹಾಗೂ ಬಾದುಷಾ ನೀಡುವ ಮೂಲಕ ವಿಶೇಷ ಭೋಜನವನ್ನು ನೀಡಲಾಯಿತು.  ನಂತರ ಮಾತನಾಡಿದ  ಸಹಾಯಕ ವೃತ್ತ ನಿರೀಕ್ಷಕ ಸುನೀಲ್ ಮಾತನಾಡಿ ಸೋಂಕು ಆರೋಗ್ಯಕ್ಕೆ ಅಪಾಯಕಾರಿ ಇದ್ದರೂ ಸೇವಾದೃಷ್ಟಿ ಯಿಂದ ಸೋಂಕಿತರ ಬಗ್ಗೆ ನಿಗಾ ವಹಿಸುತ್ತಿರುವ ಆಶಾ ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರ ಸೇವೆ ಅವಿಸ್ಮರಣೀಯ .ಇಂತಹ ಸಂಕಷ್ಟದಲ್ಲಿ ಬಡವರ ಹಸಿವು ನೀಗಿಸುತ್ತಿರುವ ಮೈಸೂರಿನ ಹೆಸರಾಂತ ಸೇವಾ ಸಂಸ್ಥೆಯಾದ
ಸಿದ್ಧಪ್ಪ ಸುಶಿಲಮ್ಮ ಚಾರಿಟಬಲ್ ಟ್ರಸ್ಟ್ ಈ ದಿನ ವಿಶೇಷವಾಗಿ ಸಿಹಿ ಊಟ ಹಾಕುವ ಮೂಲಕ ಅಸಹಾಯಕರಿಗೂ ವಿಶೇಷ ಭೋಜನ ನೀಡುವಲ್ಲಿ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

,ಕೋವಿಡ್ ಸಂಕಷ್ಟದಲ್ಲಿ ಹಲವಾರು ಸಂಘ- ಸಂಸ್ಥೆಗಳು ದಾನಿಗಳು ನೆರವು ನೀಡಿದ್ದು ,
ಮಾನವೀಯ ಮೌಲ್ಯ ಹೆಚ್ಚುವಂತೆ ಮಾಡಿದೆ ಎಂದರು.

ಇದೇ ಸಂದರ್ಭದಲ್ಲಿ  ಸಿದ್ದಪ್ಪ ಸುಶಿಲಮ್ಮ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಕೇಬಲ್ ಮಹೇಶ ,
ಮಂಜುನಾಥ್ ,ಮಹದೇವ್ ಪ್ರಸಾದ್ ,ಮಹೇಶ್, ಮೋಹನ್’ ಸತೀಶ್ ,ವಿನಯ್ ಬಸಪ್ಪ  ಇನ್ನಿತರರು ಹಾಜರಿದ್ದರು.

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: