ಕರ್ನಾಟಕಪ್ರಮುಖ ಸುದ್ದಿ

ಸೋಂಕಿತರ ಆರೋಗ್ಯ ವಿಚಾರಿಸಿದ ಶಾಸಕರಾದ ಕೆ.ಜಿ.ಬೋಪಯ್ಯ

ರಾಜ್ಯ(ಮಡಿಕೇರಿ)ಜೂ.4:-  ಶಾಸಕರಾದ ಕೆ.ಜಿ.ಬೋಪಯ್ಯ ಅವರು ಗುರುವಾರ ವಿರಾಜಪೇಟೆ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದರು.
ಸರಿಯಾದ ಸಮಯಕ್ಕೆ ಊಟ ಪೂರೈಕೆಯಾಗುತ್ತಿದೆಯೆ? ಬಿಸಿ ನೀರು ಸರಬರಾಜು ಆಗುತ್ತಿದೆಯೇ? ಹಾಗೂ ವೈದ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆಯೆ? ಎಂದು ಕೆ.ಜಿ.ಬೋಪಯ್ಯ ಅವರು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಾಖಲಾದ ಸೋಂಕಿತರು ಬಿಸಿಯಾದ ಊಟ, ಉಪಹಾರ ನೀಡುತ್ತಿದ್ದಾರೆ. ಬಿಸಿ ನೀರು ಇದೆ. ಪ್ರತಿ ದಿನ 3 ಬಾರಿ ವೈದ್ಯರು ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿಯೊಬ್ಬರೂ ಯೋಗಾಸಾನ, ಪ್ರಾಣಾಯಾಮ ಮಾಡಬೇಕು. ಧೈರ್ಯವಾಗಿರಬೇಕು, ಯಾವುದೇ ಕಾರಣಕ್ಕೂ ವಿಚಲಿತರಾಗಬಾರದು. ಮಾಸ್ಕ್, ಸ್ಯಾನಿಟೈಸರ್ ಬಳಸುವುದು, ಅಂತರ ಕಾಯ್ದುಕೊಳ್ಳಬೇಕು. ಇವುಗಳ ಪಾಲನೆಯಿಂದ ಕೋವಿಡ್‍ನಿಂದ ದೂರ ಇರಬಹುದಾಗಿದೆ ಎಂದು ಶಾಸಕರು ಸಲಹೆ ಮಾಡಿದರು.
ಬಳಿಕ ಏಕಲವ್ಯ ಮಾದರಿ ವಸತಿ ಶಾಲೆಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿದ ಸಂದರ್ಭದಲ್ಲಿ ಅಲ್ಲಿನ ಸೋಂಕಿತರು ಊಟೋಪಚಾರ ಚೆನ್ನಾಗಿದೆ. ಆದರೆ ಈ ಪ್ರದೇಶದಲ್ಲಿ ಮೋಬೈಲ್ ನೆಟ್‍ವರ್ಕ್ ಲಭ್ಯವಾಗುತ್ತಿಲ್ಲ. ಇದರಿಂದ ಕುಟುಂಬದವರ ಜೊತೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಳಲು ತೊಡಿಕೊಂಡರು.
‘ತುಂಬಾ ಬಡತನ ಕುಟುಂಬದಿಂದ ಬಂದಿದ್ದು, ಕೂಲಿ ಮಾಡಿದರೆ ಹೊಟ್ಟೆಗೆ ಊಟ, ಇಲ್ಲದಿದ್ದಲ್ಲಿ ಉಪವಾಸ ಆದ್ದರಿಂದ ಸೋಂಕಿತರ ಕುಟುಂಬದವರಿಗೆ ಪಡಿತರ ವಿತರಿಸುವಂತಾಗಬೇಕು ಎಂದು ಸೋಂಕಿತರು ಶಾಸಕರಲ್ಲಿ ಮನವಿ ಮಾಡಿದರು. ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸ್ಥಳದಲ್ಲೇ ತಹಶೀಲ್ದಾರರಿಗೆ ಪಡಿತರ ವಿತರಿಸುವಂತೆ ನಿರ್ದೇಶನ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: