ದೇಶಪ್ರಮುಖ ಸುದ್ದಿ

ಕೊರೊನಾ ಹೋರಾಟಕ್ಕೆ 25 ಲಕ್ಷ ರೂ. ದೇಣಿಗೆ ನೀಡಿದ ನಟ ವಿವೇಕ್ ಒಬೆರಾಯ್

ಮುಂಬೈ,ಜೂ.4-ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ತಾವೇ ಶುರು ಮಾಡಿರುವ ‘ಐ ಆಮ್ ಆಕ್ಸಿಜನ್ ಮ್ಯಾನ್’ ಇನಿಷಿಯೇಟಿವ್‌ಗೆ ವಿವೇಕ್ ಒಬೆರಾಯ್ 25 ಲಕ್ಷ ರೂ. ಮೀಸಲಿಟ್ಟಿದ್ದಾರೆ.

ಕೋವಿಡ್ ಎರಡನೇ ಅಲೆಯಿಂದಾಗಿ ಜನ ಪಡುತ್ತಿರುವ ಕಷ್ಟ ಹೇಳತೀರದು. ‘ಐ ಆಮ್ ಆಕ್ಸಿಜನ್ ಮ್ಯಾನ್’ ಇನಿಷಿಯೇಟಿವ್‌ನಿಂದ ಅನೇಕರಿಗೆ ಸಹಾಯ ಮಾಡಲು ಮುಂದಾಗಿದ್ದೇವೆ. ಈಗಾಗಲೇ ದೆಹಲಿಯಲ್ಲಿ 200 ಹಾಸಿಗೆ ಸಾಮರ್ಥ್ಯದ ಉಚಿತ ಕೋವಿಡ್ ಆಸ್ಪತ್ರೆ ತೆರೆಯಲಾಗಿದ್ದು, ಕಳೆದ ಕೆಲವು ವಾರಗಳಿಂದ ಅನೇಕ ಜನರ ಜೀವ ಉಳಿಸಲು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ನನ್ನ ಕಡೆಯಿಂದ ಎಷ್ಟು ಸಾಧ್ಯವೋ, ಅಷ್ಟನ್ನು ಈ ಸೇವೆಗಾಗಿ ನೀಡುತ್ತಿದ್ದೇನೆ. ಡಾ.ವಿವೇಕ್ ಬಿಂದ್ರಾ ಮತ್ತು ತಂಡ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಮ್ಮ ಚಿತ್ರರಂಗದಿಂದಲೂ ನನ್ನ ಅನೇಕ ಸ್ನೇಹಿತರು ಮುಂದೆ ಬಂದು ಸಹಾಯ ಮಾಡಿದ್ದಾರೆ. ನಾವೆಲ್ಲ ಒಟ್ಟಿಗೆ ನಿಂತು, ಒಬ್ಬರಿಗೊಬ್ಬರು ಸಹಾಯ ಮಾಡಿದರೆ ಈ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬಹುದು ಎಂದು ಹೇಳಿದ್ದಾರೆ. ‘ಐ ಆಮ್ ಆಕ್ಸಿಜನ್ ಮ್ಯಾನ್’ ದೇಣಿಗೆ ಸಂಗ್ರಹ ಅಭಿಯಾನ ಹೊರತಾಗಿ ಅನೇಕ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ವಿವೇಕ್ ಒಬೆರಾಯ್ ಧನಸಹಾಯ ಮಾಡಿದ್ದಾರೆ. ಜೊತೆಗೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳಿಗೂ ಸಹಾಯ ಹಸ್ತ ಚಾಚಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: