ಮೈಸೂರು

ಕೊರೋನಾ ಸಂಕಷ್ಟದಲ್ಲಿ ಮೈಸೂರನ್ನು ಉಳಿಸುವಂತೆ ಒತ್ತಾಯಿಸಿ   ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪ್ರತಿಭಟನೆ

ಮೈಸೂರು,ಜೂ.4:- ಕೊರೋನಾ ಸಂಕಷ್ಟದಲ್ಲಿ ಮೈಸೂರನ್ನು ಉಳಿಸುವಂತೆ ಒತ್ತಾಯಿಸಿ   ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರಿಂದು ಮೈಸೂರಿನ ಗಾಂಧಿ ಚೌಕದಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಅವರು ಕೊರೋನಾ ಸಂಕಷ್ಟದಲ್ಲಿ ಜನ ನಾನಾರೀತಿಯ ತೊಂದರೆ , ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ದಿಕ್ಕು ತಪ್ಪಿದ ರೀತಿಯಲ್ಲಿ ಓಡಾಡುತ್ತಿದ್ದಾರೆ. ರೆಮ್ಡಿಸಿವಿರ್ ಸಿಗುತ್ತಿಲ್ಲ. ಕೆಲವರಿಗೆ ಆಕ್ಸಿಜನ್ ಬೆಡ್ ಸಿಗುತ್ತಿಲ್ಲ. ಐಸಿಯು ಬೆಡ್ ಸಿಗುತ್ತಿಲ್ಲ. ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ವ್ಯಾಕ್ಸಿನ್ ಅಂತೂ ಸಿಗ್ತಾನೇ ಇಲ್ಲ. ಇಂತಹ ಒಂದು ಬಹಳ ಸಂಕಷ್ಟದ ಸಂದರ್ಭದಲ್ಲಿ ಶಾಸಕರು, ಸಂಸದರು ತಮ್ಮ ವೈಯುಕ್ತಿಕ ಅಜೆಂಡಾಗಳನ್ನು ಇಟ್ಟುಕೊಂಡು ಬೇರೆ ಬೇರೆ  ರೀತಿಯಲ್ಲಿ ಆರೋಪ, ಪ್ರತ್ಯಾರೋಪ ಮಾಡಿಕೊಂಡು ಏನೋ ಒಳಾರ್ಥ ಬೇರೆ ಇಟ್ಟುಕೊಂಡು ಈ ಪ್ರಹಸನ, ನಾಟಕಗಳು ನಡೆಯುತ್ತಿವೆ.   ಈಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ  ಸರ್ಕಾರದ ಬಗ್ಗೆ ಪ್ರಧಾನಿಯವರ ಬಗ್ಗೆ, ವ್ಯಾಕ್ಸಿನ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮೈಸೂರು ಜನರು ರೊಚ್ಚಿಗೇಳುವ ಮೊದಲು ನಾಟಗಳನ್ನು ನಿಲ್ಲಿಸಿ, ಜನರ ಸಂಕಷ್ಟಕ್ಕೆ ಹೆಗಲುಕೊಡಿ, ಮೈಸೂರು ಜನರನ್ನು ಉಳಿಸಿ ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: