ಕರ್ನಾಟಕಪ್ರಮುಖ ಸುದ್ದಿ

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಟ್ವಿಟ್ವರ್ ಖಾತೆ ಹ್ಯಾಕ್

ಬೆಂಗಳೂರು,ಜೂ.4-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ್ ಗುಪ್ತ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ.

ಗೌರವ್ ಗುಪ್ತ ಅವರ ಟ್ವಿಟ್ಟರ್ ಖಾತೆಯ ಡಿಸ್‌ಪ್ಲೇಯನ್ನು Tesla(ಟೆಸ್ಲಾ) ಎಂದು ಬದಲಾಯಿಸಲಾಗಿತ್ತು. ಬಳಿಕ ಅದನ್ನು ಮತ್ತೆ ಬದಲಾಯಿಸಲಾಗಿತ್ತು, ಇದೀಗ ದೊರೆತಿರುವ ಮಾಹಿತಿ ಪ್ರಕಾರ ಗೌರವ್ ಗುಪ್ತ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ.

ಆದರೆ ಇದಕ್ಕೆ ಯಾರು ಕಾರಣ ಎಂಬುದು ತಿಳಿದುಬಂದಿಲ್ಲ. ಹ್ಯಾಕರ್ ಈ ಟ್ವಿಟ್ಟರ್ ಬಳಸಿ ಮಾಡಿದ ಟ್ವೀಟ್ ಒಂದರಲ್ಲಿ ವಿಶ್ವದ ಕಠಿಣ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮಾನವೀಯತೆಯ ಹಾದಿಯಲ್ಲಿ ನಡೆಯುವುದು ನಮ್ಮ ಗುರಿ, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ 5 ಸಾವಿರ ಬಿಟಿಸಿ ವಿತರಿಸಲಾಗುವುದು ಎಂದು ಬರೆದು ಬಳಿಕ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಆದರೆ ಆಯುಕ್ತರಿಂದ ಯಾವುದೇ ಹೇಳಿಕೆಗಳು ಬಂದಿಲ್ಲ. ಕಳೆದ ತಿಂಗಳು ಬಿಬಿಎಂಪಿ ಕೋವಿಡ್ 19 ರೋಗಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಿ ಬಳಿಕ ತೆಗೆದುಹಾಕಲಾಗಿತ್ತು. (ಎಂ.ಎನ್)

 

Leave a Reply

comments

Related Articles

error: