ಮೈಸೂರು

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಯನ್ನು ರಾಜ್ಯ ಸರ್ಕಾರ ರಾಜ್ಯಮಟ್ಟದಲ್ಲಿ ಆಚರಿಸಲಿ :

ಮೈಸೂರು, ಜೂ.4:-  ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತಿಯನ್ನು ರಾಜ್ಯಸರ್ಕಾರ ರಾಜ್ಯಮಟ್ಟದಲ್ಲಿ ಆಚರಿಸಲಿ ಎಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಆಗ್ರಹಿಸಿದರು

ಮೈಸೂರಿನಲ್ಲಿ ಇಂದು ಕೃಷ್ಣ ರಾಜ ಯುವಕರ ಬಳಗದ ವತಿಯಿಂದ  ನಾಲ್ವಡಿ ಕೃಷ್ಣರಾಜ ಒಡೆಯರ ರವರ 137ನೇ ಜಯಂತಿಯ ಅಂಗವಾಗಿ ಕುರುಬಾರಳ್ಳಿಯ ಕನಕ ಸಮುದಾಯ ಭವನದಲ್ಲಿ ಆ ಭಾಗದ ನಿರಾಶ್ರಿತರಿಗೆ ,ಬಡವರಿಗೆ,ಮನೆಗೆಲಸದ ಮಹಿಳೆಯರಿಗೆ ಕಾಂಗ್ರೇಸ್ ಮುಖಂಡರಾದ ಎನ್.ಎಂ. ನವೀನ್ ಕುಮಾರ್ ಮತ್ತು ಕುರುಬಾರಳ್ಳಿಯ ಯಜಮಾನ್ರುಗಳು ಅಗತ್ಯ ದಿನಸಿ ಕಿಟ್ ಗಳನ್ನು ವಿತರಿಸಿದರು.
ಬಳಿಕ ಕಾರ್ಯಕ್ರಮ ಕುರಿತು  ಎನ್.ಎಂ.ನವೀನ್ ಕುಮಾರ್ ಮಾತನಾಡಿ ಲಾಕ್ ಡೌನ್ ಸಂದರ್ಭದಲ್ಲಿ ಸಣ್ಣಪುಟ್ಟಮಕ್ಕಳ ಬಗ್ಗೆ ಜಾಗೃತಿವಹಿಸಿ ನೋಡಿಕೊಳ್ಳವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ, ಸೊಂಕು ತಗಲದ ಹಾಗೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು ,
ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತಿಯನ್ನು ರಾಜ್ಯಸರ್ಕಾರ ರಾಜ್ಯಮಟ್ಟದಲ್ಲಿ ಆಚರಿಸುವಂತಾಗಬೇಕು ಹಾಗು ಅವರ ಕೊಡುಗೆಗಳು ಇಂದಿಗೂ ಪ್ರಸ್ತುತ ವಾಗಿರುವುದರಿಂದ ಮೈಸೂರಿನ ಕೃಷ್ಣರಾಜ ವೃತ್ತದಲ್ಲಿ ಅವರ ಕೊಡುಗೆಗಳನ್ನು ಶಾಶ್ವತವಾಗಿ ಪ್ರಸಾರವಾಗುವಂತೆ ಮಾಡಬೇಕೆಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಕುರುಬಾರಳ್ಳಿ ಯಜಮಾನರಾದ ಶಂಕರ್, ಪ್ರಕಾಶ್ ಕುರುಬಾರಹಳ್ಳಿ,ಬಸವರಾಜು,ಧನ್ ಪಾಲ್, ರಾಜೇಶ್,ಶ್ರೀನಿವಾಸ್, ಪವನ್ ಸಿದ್ಧರಾಮು,ಶಶಿರಾಜ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: