ಮೈಸೂರು

ಅವ್ಯವಹಾರಗಳ ಕುರಿತು ಸರ್ಕಾರ ತನಿಖೆ ನಡೆಸಿ ಸಾರ್ವತ್ರಿಕವಾಗಿ ಶ್ವೇತಪತ್ರ ಹೊರಡಿಸಲಿ : ಎಸ್.ಬಾಲಕೃಷ್ಣ

ಕನ್ನಡ ಸಾಹಿತ್ಯ ಪರಿಷತ್ ಎನ್ನುವುದು ಸಮಗ್ರ ಕನ್ನಡಿಗರ ಮಾತೃ ಸಂಸ್ಥೆ. ಇದು ಯಾವುದೇ ಒಂದು ವ್ಯಕ್ತಿಯ ಅಥವಾ ಒಂದು ಗುಂಪಿನ ಆಸ್ತಿಯಲ್ಲ. ಈ ಸಂಸ್ಥೆಯಿಂದ ಜರುಗುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೂಡಾ ಸಮಸ್ತೆ ಕನ್ನಡಿಗರ ಹಬ್ಬವಾಗಿದ್ದು, ಮೈಸೂರಿನಲ್ಲೆ ನಡೆಯುತ್ತಿರುವುದು ಸಂತಸದ ವಿಷಯವಾದರೂ ಯಾರೋ ಕೆಲವರ ಸ್ವಾರ್ಥದ ಸ್ವಲಾಭಕ್ಕಾಗಿ ತರಾತುರಿಯಲ್ಲಿ ಸಮ್ಮೇಳನ ನಡೆಸುವುದು ಯಾರೂ ಒಪ್ಪುವಂಥದ್ದಲ್ಲ ಎಂದು ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ  ತಿಳಿಸಿದರು.

ಮೈಸೂರಿನ ಗನ್ ಹೌಸ್ ಬಳಿ ಇರುವ ವಿಶ್ವಮಾನವ ಕುವೆಂಪು ಉದ್ಯಾನವನದಲ್ಲಿ ನಡೆದ ಸಮಾನ ಮನಸ್ಕ ಸಭೆಯಲ್ಲಿ ಮಾತನಾಡಿದ ಅವರು ಜೂನ್ ತಿಂಗಳಿನಲ್ಲಿ 83ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದು ಖಂಡಿತ ಸರಿಯಲ್ಲ ಎಂದರು. ವರ್ಷ ತುಂಬುವುದರೊಳಗೆ ಎರಡು ಮೂರು ಬಾರಿ ಸಮ್ಮೇಳನ ಮಾಡಿ ಸಾರ್ವಜನಿಕರ ತೆರಿಗೆ ಹಣವಾದ ಕೋಟ್ಯಾಂತರ ರೂ.ವನ್ನು ಪೋಲು ಮಾಡುವುದು ಸರಿಯಲ್ಲ ಎಂದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿರುವ ಎಲ್ಲಾ ರೀತಿಯ ಅವ್ಯವಹಾರಗಳ ಕುರಿತು ಸರ್ಕಾರ ತನಿಖೆ ನಡೆಸಿ ಸಾರ್ವತ್ರಿಕವಾಗಿ ಶ್ವೇತಪತ್ರ ಹೊರಡಿಸಲಿ ಎಂಬ ನಿರ್ಣಯಕ್ಕೆ ಬರಲಾಯಿತು.

ಸಭೆಯಲ್ಲಿ ಇತಿಹಾಸ ತಜ್ಞ ನಂಜರಾಜೇ ಅರಸ್, ಸಾಹಿತಿಗಳಾದ ಮುನಿವೆಂಕಟಪ್ಪ, ಕೃಷ್ಣಮೂರ್ತಿ, ಬನ್ನೂರು ಕೆ.ರಾಜು, ನರಸಿಂಹಮೂರ್ತಿ, ಡಿಸಿಸಿ ಯ ರೇವಣ್ಣ, ಗೈಡ್ ಸ್ವಾಮಿ, ಸಿರಿಗನ್ನಡ ವೇದಿಕೆಯ ರಾಜ್ಯ ಉಪಾಧ್ಯಕ್ಷ ಸೌಗಂಧಿಕಾ ಜೋಯಿಸ್, ಕನ್ನಡ ಹೋರಾಟಗಾರ ಬೋಗಿ ನಂದೀಶ್, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: