ಮೈಸೂರು

ಕೃಷಿ ಅಧಿಕಾರಿ ಪುರುಷೋತ್ತಮ್ ಗೆ ರೈತ ಒಕ್ಕೂಟದಿಂದ ಸನ್ಮಾನ

ಕೃಷಿ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸಹಾಯಕ ಕೃಷಿ ಅಧಿಕಾರಿ ಎನ್.ಪುರುಷೋತ್ತಮ್ ಅವರನ್ನು ಮೈಸೂರು ತಾಲೂಕು ಕಸಬಾ ಹೋಬಳಿ ರೈತರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಗುವುದು ಎಂದು ನಾಗನಹಳ್ಳಿ ಶ್ರೀಲಕ್ಷ್ಮೀದೇವಿ ಕೃಷಿ ಬೆಳೆಗಾರರ ಸಂಘದ ಎಸ್.ಸ್ವಾಮಿಗೌಡ ತಿಳಿಸಿದರು.

ಮಂಗಳವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಸನ್ಮಾನ ಸಮಾರಂಭವನ್ನು ಏ.28ರಂದು ಬೆಳಿಗ್ಗೆ 10.30ಕ್ಕೆ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.  ಕಾರ್ಯಕ್ರಮದಲ್ಲಿ ನಾಗನಹಳ್ಳಿ, ಲಕ್ಷ್ಮೀಪುರ, ಕಳಸ್ತವಾಡಿ ಸಿದ್ದಲಿಂಗಪುರ, ಕೆಸರೆ, ಕಾಮನಕೆರೆಹುಂಡಿ, ರಮ್ಮನಹಳ್ಲಿ ಸೇರಿದಂತೆ ಹಲವಾರು ಗ್ರಾಮಗಳ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೃಷಿ  ಅಧಿಕಾರಿ ಪುರುಷೋತ್ತಮ್ ಅವರು ರೈತರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಅವರ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.  ಕೇವಲ ಒಂದು ಫೋನ್ ಕರೆಗೆ ರೈತನ ಮನೆ ಬಾಗಿಲಿಗೆ ಬಂದು ಸ್ಪಂದಿಸಿದ್ದಾರೆ. ಇಂತಹ ಸರ್ಕಾರಿ ಅಧಿಕಾರಿಗಳು ಸಮಾಜಕ್ಕೆ ಅಗತ್ಯ ಎಂದು ಸ್ಮರಿಸಿದರು. ಪುರುಷೋತ್ತಮ ಅವರು ಜಿಲ್ಲೆಯ ನಂಜನಗೂಡು, ಗುಂಡ್ಲುಪೇಟೆ, ಟಿ.ನರಸೀಪುರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಉತ್ತಮ ಸೇವೆ ನೀಡಿ ರೈತರಿಗೆ ಆಶಾಕಿರಣವಾಗಿದ್ದಾರೆ. ಇವರ ಕಾರ್ಯವೈಖರಿ ಮುಂಬರುವ ಕಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನವಾಗಬೇಕೆಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ನಾಗನಹಳ್ಳಿ ಮಾಜಿ ಗ್ರಾ.ಪಂ ಅಧ್ಯಕ್ಷ ಎನ್.ಎಸ್.ಯಾದವೇಂದ್ರ, ಎಪಿಎಂಸಿ ಮಾಜಿ ಸದಸ್ಯ ಮಾದೇಗೌಡ, ರೈತಶಕ್ತಿ ಗುಂಪು ಅಧ್ಯಕ್ಷ ವೆಂಕಟೇಶ್, ಶ್ರೀಕಂಠು ಹಾಗೂ ಇತರ ರೈತರು ಉಪಸ್ಥಿತರಿದ್ದರು.(ಕೆ.ಎಂ.ಆರ್)

Leave a Reply

comments

Related Articles

error: