ಕ್ರೀಡೆದೇಶಪ್ರಮುಖ ಸುದ್ದಿ

ಡೋಪ್ ಪರೀಕ್ಷೆಯಲ್ಲಿ ವಿಫಲ : ಒಲಿಂಪಿಕ್ ಟಿಕೆಟ್ ಕಳೆದುಕೊಂಡ ಕುಸ್ತಿಪಟು ಸುಮಿತ್ ಮಲಿಕ್

ದೇಶ(ನವದೆಹಲಿ)ಜೂ.5:- ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಫ್ರೀಸ್ಟೈಲ್‌ನಲ್ಲಿ (125 ಕೆಜಿ ವಿಭಾಗ) ಪದಕ ಗೆಲ್ಲುವ ಭಾರತದ ಕನಸು ಕಮರಿದೆ.
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಫ್ರೀಸ್ಟೈಲ್ ಕುಸ್ತಿಪಟು ಸುಮಿತ್ ಮಲಿಕ್ ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಡೋಪ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಸುಮಿತ್ ಮಲಿಕ್ ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಭಾಗವಹಿಸುವುದಿಲ್ಲ.
ಮೇ 6-9 ರಿಂದ ಬಲ್ಗೇರಿಯಾದ ಸೋಫಿಯಾದಲ್ಲಿ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಆಯೋಜಿಸಿದ್ದ ಒಲಿಂಪಿಕ್ ಕ್ವಾಲಿಪೈರ್ ನಲ್ಲಿ ಸುಮಿತ್ ಮಲಿಕ್ ಅವರನ್ನು ಡೋಪ್ ಪರೀಕ್ಷೆ ನಡೆಸಲಾಗಿತ್ತು. ದೆಹಲಿ ಕುಸ್ತಿಪಟು ಸುಮಿತ್ ಸೋಫಿಯಾದಲ್ಲಿಯೇ 125 ಕೆಜಿ ಫ್ರೀಸ್ಟೈಲ್ ಸ್ಪರ್ಧೆಗೆ ಒಲಿಂಪಿಕ್ ಟಿಕೆಟ್ ಪಡೆದಿದ್ದರು.
ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಡೋಪ್ ಪರೀಕ್ಷೆಯಲ್ಲಿ ಭಾರತ ಒಲಿಂಪಿಕ್ಸ್‌ನಲ್ಲಿ 125 ಕೆಜಿ ವಿಭಾಗದ ಸ್ಥಾನವನ್ನು ಕಳೆದುಕೊಂಡಿದೆ. ಈ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸುಮಿತ್ ಮಲಿಕ್ ಅವರಿಗೆ ಸಾಧ್ಯವಾಗುವುದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: