ಮೈಸೂರು

ನಾವು ಪರಿಸರವನ್ನು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ : ಮಹೇಶ್ ಶೆಣೈ

ಮೈಸೂರು,ಜೂ.5:- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದಿಂದ ಕಾಳಿದಾಸ ರಸ್ತೆಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪೋಷಿಸುವ ನಿಟ್ಟಿನಲ್ಲಿ ಟ್ರೀ ಗಾರ್ಡ್ ನೆಡಲಾಯಿತು.

ಕಾಮಾಕ್ಷಿ ಆಸ್ಪತ್ರೆಯ ಮಾಲೀಕರಾದ ಮಹೇಶ್ ಶೆಣೈ ಮಾತನಾಡಿ ಒಂದು ಮರ 10 ಸಾವಿರ ಲೀಟರ್ ನೀರನ್ನು ಭೂಮಿಗಿಳಿಸುತ್ತದೆ. ಅದನ್ನು ಹಾಳು ಮಾಡಿದರೆ ಗಾಳಿ, ನೀರು ದೊರಕುವುದಿಲ್ಲ. ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ನಾವು ಕಾಣಿಕೆಯಾಗಿ ಕೊಡಬೇಕು. ಅದಕ್ಕಾಗಿ, ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ’ ಎಂದರು.

‘ಪ್ರತಿಯೊಬ್ಬರು ಮನೆ ಕಟ್ಟುವಾಗ ಕನಿಷ್ಠ ಎರಡು ಸಸಿ ನೆಟ್ಟು, ಅವುಗಳನ್ನು ರಕ್ಷಿಸಬೇಕು. ಪರಿಸರ ತಾಯಿ ಇದ್ದಂತೆ, ನಾವು ಪರಿಸರವನ್ನು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ನಿರ್ದೇಶಕರಾದ ಎಂ ಆರ್ ಬಾಲಕೃಷ್ಣ ,ಕಡಕೊಳ ಜಗದೀಶ್ ,ಸುಚೇಂದ್ರ ,ಜಯಸಿಂಹ ಶ್ರೀಧರ್ ,ಚಕ್ರಪಾಣಿ   ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: