ಮೈಸೂರು

ವೃದ್ಧೆಗೆ ಕಾರು ಡಿಕ್ಕಿ : ಸಾವು

ಅಪರಿಚಿತ ಕಾರೊಂದು ರಸ್ತೆಯ ಬದಿಯಲ್ಲಿ ನಿಂತಿದ್ದ ವೃದ್ಧೆಯೋರ್ವರಿಗೆ ಗುದ್ದಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನ ರಿಂಗ್ ರಸ್ತೆ ಬಳಿ ನಡೆದಿದೆ.

ಸುಮಾರು 60ರ ವಯೋಮಾನದ ವೃದ್ಧೆಯೋರ್ವರು ರಿಂಗ್ ರಸ್ತೆ ಬಳಿಯ ಆದಿತ್ಯ ಸರ್ಕಲ್ ನ ರಸ್ತೆ ಬದಿ ನಿಂತಿದ್ದಾಗ ವೇಗವಾಗಿ ಬಂದ ಕಾರೊಂದು ಬಲವಾಗಿ ಗುದ್ದಿದೆ. ಗುದ್ದಿದ ರಭಸಕ್ಕೆ ಅವರು ನೆಲಕ್ಕೆ ಬಿದ್ದಿದ್ದು, ತಲೆಯಿಂದ ತೀವ್ರತೆರನಾದ ಗಾಯಗಳುಂಟಾಗಿ ರಕ್ತ ಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೇರತರ ವಿವರ ತಿಳಿದುಬಂದಿಲ್ಲ. ಕುವೆಂಪು ನಗರ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: