ಕರ್ನಾಟಕಪ್ರಮುಖ ಸುದ್ದಿಮೈಸೂರು

ಶಾಸಕ ಸಾ.ರಾ.ಮಹೇಶ್ ರಿಂದ ಅಕ್ರಮ ಭೂ ಕಬಳಿಕೆ : ಸಾಮಾಜಿಕ ಹೋರಾಟಗಾರ ಗಂಗರಾಜು ಗಂಭೀರ ಆರೋಪ

ಮೈಸೂರು , ಜೂ.5:- ಸರ್ವೇ ನಂಬರ್ 115 ಕೇರ್ಗಳ್ಳಿ ಗ್ರಾಮದಲ್ಲಿ ಅಕ್ರಮ ಭೂ ಕಬಳಿಕೆ ಆಗಿದೆ ಎಂದು ಸಾಮಾಜಿಕ ಹೋರಾಟಗಾರ ಗಂಗರಾಜು ಎಂಬವರು ಶಾಸಕ ಸಾ.ರಾ.ಮಹೇಶ್ ವಿರುದ್ಧ ಗಂಭೀರವಾಗಿ ಆರೋಪಿಸಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಭೂಮಾಲೀಕರಿಗೆ ಶಾಸಕ ಸಾರಾ ಮಹೇಶ್ ಅವಾಚ್ಯ ಶಬ್ದ ಬಳಸಿದ್ದಾರೆ. ಭೂ ಅಕ್ರಮದ ಬಗ್ಗೆ ಅವರೇ ಮಾತನಾಡಿರುವ ಸಂಪೂರ್ಣ ಆಡಿಯೋ ಇದೆ. ನನ್ನದು ಒಂದೇ ಮುಖ ನೋಡಿದ್ದೀಯ ಇನ್ನೊಂದು ಮುಖ ತೋರಿಸ್ತಿನಿ ಎಂದು ಬೆದರಿಸಿದ್ದಾರೆ. 500ಎಕರೆ ಗಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ಆಡಿಯೋದಲ್ಲಿ ಮಾತನಾಡಿದ್ದಾರೆ. ಭೂ ಮಾಲೀಕ ನ್ಯಾಯಾಲಯ ಹಾಗೂ ಮಾಧ್ಯಮದ ಮುಂದೆ ಹೋಗ್ತೇನೆ ಎಂದಾಗ ನಾನು ಯಾವುದಕ್ಕೂ ಹೆದರಲ್ಲ ಎಂದಿದ್ದಾರೆ. ಜಿಲ್ಲಾಡಳಿತ ಹಾಗೂ ನ್ಯಾಯಾಲಯದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ವಿಚಾರವನ್ನು ನಾನು ಜಿಲ್ಲಾಧಿಕಾರಿ ಬಳಿ ದೂರು ನೀಡಿದ್ದೇನೆ. ಪ್ರಕರಣದ ಬಗ್ಗೆ ಡಿಸಿ ತನಿಖೆ ಕೈಗೊಂಡಿರುವುದನ್ನ ಗಮನಿಸಿ ಡಿಸಿ ವರ್ಗಾವಣೆ ಕುತಂತ್ರ ನಡೆಸಿದ್ದಾರೆ. ಮೈಸೂರು ಜಿಲ್ಲೆಗೆ ಹಾಗೂ ಹೆಣ್ಣಿಗೆ ಕಳಂಕ ತರುವ ರೀತಿ ವರ್ತಿಸಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಈ ಅಕ್ರಮದಲ್ಲಿ‌ಮುಡಾ ಅಧ್ಯಕ್ಷ ರಾಜೀವ್ ಹಾಗೂ ಮುಡಾ ಆಯುಕ್ತ ನಟೇಶ್ ಕೈವಾಡ ಇದೆ. ಭೂ ಅಕ್ರಮದ ಬಗ್ಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರಾ ಮಹೇಶ್ ವಿರುದ್ಧ ಸಾಮಾಜಿಕ ಹೋರಾಟಗಾರ ಗಂಗರಾಜು ಗಂಭೀರ ಆರೋಪ ಮಾಡಿದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: