ಕರ್ನಾಟಕಪ್ರಮುಖ ಸುದ್ದಿ

ಕನ್ನಡದ ಹಿರಿಯ ನಟಿ ಸುರೇಖಾ ಹೃದಯಾಘಾತದಿಂದ ನಿಧನ

ರಾಜ್ಯ(ಬೆಂಗಳೂರು)ಜೂ.7:- ವರನಟ ಡಾ. ರಾಜ್‌ಕುಮಾರ್ ಅವರ ಜೊತೆ “ತ್ರಿಮೂರ್ತಿ”ಯಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಸುರೇಖಾ ಹೃದಯಾಘಾತದಿಂದ ನಿಧನರಾದರು.
ಅವರಿಗೆ 66 ವರ್ಷ ವಯಸ್ಸಾಗಿತ್ತು. 160ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸುರೇಖಾ ಬೆಂಗಳೂರು ನಗರದಲ್ಲಿ ನಿಧನರಾದರು. ಮಣ್ಣಿನ ಮಕ್ಕಳು, ಸಂಭ್ರಮ, ಕಿಂಗ್, ಶಂಕರ್ ಸುಂದರ್, ಆಲೆಮನೆ, ಬಿಳಿಗಿರಿಯ ಬನದಲ್ಲಿ ಚಿತ್ರಗಳಲ್ಲಿ ರಾಜ್‌ಕುಮಾರ್ ಜತೆ ನಟಿಸಿದ್ದಾರೆ.

ನಟಿ ಸೆನ್ಸಾರ್ ಬೋರ್ಡ್ ಸದಸ್ಯೆ ಹಾಗೂ ಸ್ಟೇಟ್ ಅವಾರ್ಡ್ ಕಮಿಟಿಯ ಸದಸ್ಯೆಯಾಗಿದ್ದರು. ಸುರೇಖಾ ಅವರಿಗೆ ವಿವಾಹವಾಗಿರಲಿಲ್ಲ, ನಟಿ ಸೋದರಿ ಶಾರದಾ ಹಾಗೂ ಪ್ರೇಮಾ ಅವರನ್ನು ಅಗಲಿದ್ದಾರೆ.

Leave a Reply

comments

Related Articles

error: