ದೇಶಪ್ರಮುಖ ಸುದ್ದಿ

ಜಮ್ಮು ಮತ್ತು ಕಾಶ್ಮೀರದ ಸಿಆರ್ ಪಿಎಫ್ ವಾಹನ ಮೇಲೆ ಗ್ರೆನೇಡ್ ದಾಳಿ : 7 ಮಂದಿ ಗಾಯ

ದೇಶ(ನವದೆಹಲಿ)ಜೂ.7:-ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೊಮ್ಮೆ ವಾಹನದ ಮೇಲೆ ದಾಳಿ ಮಾಡಿದ್ದಾರೆ.
ಈ ಬಾರಿ ಭಯೋತ್ಪಾದಕರು ಸಿಆರ್‌ಪಿಎಫ್ ಬೆಂಗಾವಲನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ದಾಳಿಯಲ್ಲಿ ಕೆಲವು ಸ್ಥಳೀಯ ಜನರು ಗಾಯಗೊಂಡಿದ್ದಾರೆ. ಆದರೆ, ಅದೃಷ್ಟವಶಾತ್, ದಾಳಿಯಿಂದ ಯಾವ ಪ್ರಾಣ ಹಾನಿಯೂ ಉಂಟಾಗಿಲ್ಲ ಎನ್ನಲಾಗಿದೆ.
ಪುಲ್ವಾಮಾದ ಟ್ರಾಲ್‌ ನಲ್ಲಿ ಸಿಆರ್‌ಪಿಎಫ್ ಬೆಂಗಾವಲು ಮೇಲೆ ಭಯೋತ್ಪಾದಕರಿಂದ ಗ್ರೆನೇಡ್‌ ನಿಂದ ಹಲ್ಲೆ ನಡೆದಿದೆ. ಈ ದಾಳಿಯಲ್ಲಿ ಏಳು ಸ್ಥಳೀಯ ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ವ್ಯಕ್ತಿಯೋರ್ವರ ಸ್ಥಿತಿ ಗಂಭೀರವಾಗಿದೆ, ಅವರನ್ನು ಶ್ರೀನಗರಕ್ಕೆ ಕರೆದೊಯ್ಯಲು ತಿಳಿಸಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: