ಕ್ರೀಡೆದೇಶಪ್ರಮುಖ ಸುದ್ದಿ

ಫ್ರೆಂಚ್ ಓಪನ್: ಕಠಿಣ ಗೆಲುವಿನೊಂದಿಗೆ ನಾಲ್ಕನೇ ಸುತ್ತಿಗೆ ತಲುಪಿದ ಫೆಡರರ್ ಪಂದ್ಯಾವಳಿಯಿಂದ ಹಿಂದೆ ಸರಿಯುವ ಸಾಧ್ಯತೆ

ದೇಶ(ನವದೆಹಲಿ)ಜೂ.7:- 21 ನೇ ಗ್ರ್ಯಾಂಡ್‌ ಸ್ಲಾಮ್ ಪ್ರಶಸ್ತಿಗಾಗಿ ಹುಡುಕಾಟದಲ್ಲಿದ್ದ ರೋಜರ್ ಫೆಡರರ್, ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಮೂರನೇ ಸುತ್ತನ್ನು ಗೆಲ್ಲಲು ನಾಲ್ಕು ಸೆಟ್‌ ಗಳಿಗೆ ತೀವ್ರವಾಗಿ ಹೋರಾಟ ಮಾಡಬೇಕಾಯಿತು. ರೋಜರ್ ಫೆಡರರ್ ನಾಲ್ಕನೇ ಸುತ್ತಿನಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಪಂದ್ಯಾವಳಿಯಲ್ಲಿ ಅವರು ಮುಂದೆ ಆಡುವುದು ಖಚಿತವಾಗಿಲ್ಲ.
ಒಂದು ಕ್ಷಣ ಫೆಡರರ್‌ ಗೆ 2004 ರ ನಂತರ ಮೊದಲ ಬಾರಿಗೆ ನಾಲ್ಕನೇ ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗಲ್ಲ ಻ನಿಸಿತ್ತು. ಆದರೆ ಕೊನೆಯಲ್ಲಿ, ಅವರು 59 ನೇ ಶ್ರೇಯಾಂಕದ ಡೊಮಿನಿಕ್ ಕೊಪ್ಫರ್ ವಿರುದ್ಧ 7-6 (5), 6-7 (3), 7-6 (4), 7-5 ಅಂತರದ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು. ಪಂದ್ಯವು ರಾತ್ರಿ ಒಂದು ಗಂಟೆಯವರೆಗೆ ನಡೆದಿದ್ದು, ಕೊವಿಡ್ -19 ಕರ್ಫ್ಯೂ ಹೇರಿದ ಕಾರಣ ರಾತ್ರಿ ಒಂಭತ್ತು ಗಂಟೆಯ ನಂತರ ಪ್ರೇಕ್ಷಕರಿಲ್ಲದೆ ಪಂದ್ಯ ಆಡಲಾಯಿತು.
ಫೆಡರರ್ 68 ನೇ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಯ ನಾಲ್ಕನೇ ಸುತ್ತಿಗೆ ತಲುಪಿದ್ದು, ಇದು ದಾಖಲೆಯಾಗಿದೆ. ನಂತರದ ಸ್ಥಾನದಲ್ಲಿ ನೊವಾಕ್ ಜೊಕೊವಿಕ್ (54) ಮತ್ತು ರಾಫೆಲ್ ನಡಾಲ್ (50) ಇದ್ದಾರೆ.
ಇಪ್ಪತ್ತು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ಫೆಡರರ್ ಆಗಸ್ಟ್ 8 ರಂದು 40 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಪಂದ್ಯಾವಳಿಯಿಂದ ಹಿಂದೆ ಸರಿಯಬಹುದು ಎಂದು ಫೆಡರರ್ ಹೇಳಿದ್ದಾರೆ. ಮಾಜಿ ನಂಬರ್ ಒನ್ ಆಟಗಾರ “ನಾನು ಆಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ನನ್ನ ಮೊಣಕಾಲಿನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದೆ. ನಾನು ಈ ವರ್ಷ ವಿಂಬಲ್ಡನ್ ಆಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: