ಮೈಸೂರು

ದ್ವಿಚಕ್ರವಾಹನಕ್ಕೆ ಕಾರು ಡಿಕ್ಕಿ : ಸವಾರರಿಬ್ಬರ ಸಾವು

ಮೈಸೂರು,ಜೂ.7:- ದ್ವಿಚಕ್ರವಾಹನಕ್ಕೆ ಕಾರೊಂದು ಡಿಕ್ಕಿಯಾದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ಮಂಡಿಮೊಹಲ್ಲಾದ ಬಿಬಿ ಕೇರಿಯ ನಿವಾಸಿಗಳಾದ ಗಜೇಂದ್ರ(32) ಹಾಗೂ ರಾಜೇಶ್(23) ಎಂದು ಹೇಳಲಾಗಿದೆ. ಅವರು ಮಹದೇವಪುರದ ಗಣಪತಿ ದೇಗುಲದಿಂದ ಮಂಡಿಮೊಹಲ್ಲಾಕ್ಕೆ ದ್ವಿಚಕ್ರವಾಹನದಲ್ಲಿ ನಾಚನಹಳ್ಳಿ ಪಾಳ್ಯದಲ್ಲಿ ಬಂದು ಮಾನಂದವಾಡಿ ರಸ್ತೆಯಲ್ಲಿ ತೆರಳುತ್ತಿರುವಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ರಾಜೇಶ್ ಹಾರಿ ಬಿದ್ದಿದ್ದು ಗಜೇಂದ್ರ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದರು. ರಸ್ತೆವಿಭಜಕ ಮುಕ್ತಾಯಗೊಂಡ ತಕ್ಷಣ ವೇಗವಾಗಿ ಬಂದ ಕಾರು ಬಲಕ್ಕೆ ಚಲಿಸಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಕಾರಿನ ಚಾಲಕ ಪರಾರಿಯಾಗಿದ್ದು, ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಆರ್.ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: