ಕರ್ನಾಟಕಪ್ರಮುಖ ಸುದ್ದಿ

 ಆಕ್ಸಿಜನ್ ದುರಂತ 24 ಮಂದಿ ಸಾವಿಗೆ ರೋಹಿಣಿ ಸಿಂಧೂರಿ ಕಾರಣ : ಕೊಲೆ ಮೊಕದ್ದಮೆ ದಾಖಲಿಸಲು ಬಿಜೆಪಿ ರೈತ ಮುಖಂಡ ಮಲ್ಲೇಶ್ ಒತ್ತಾಯ

ರಾಜ್ಯ(ಚಾಮರಾಜನಗರ), ಜೂ.7:- ಜಿಲ್ಲೆಯ ಕೋವಿಡ್  ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟಿರುವ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಪ್ರಮುಖ ಕಾರಣಕರ್ತರಾಗಿದ್ದು, ಆಕೆ ವಿರುದ್ಧ ಕೊಲೆ ಮೊಕದ್ದಮೆ  ದಾಖಲಿಸಬೇಕೆಂದು  ಬಿಜೆಪಿ ರೈತ ಮುಖಂಡ ಮಲ್ಲೇಶ್ ಒತ್ತಾಯಿಸಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ರೋಹಿಣಿ ಸಿಂಧೂರಿ ಹಾಗೂ ಡಗ್ಸ್ ಕಂಟ್ರೋಲ್ ಅರುಣ್ ಅವರೊಂದಿಗೆ ಮಾತನಾಡಿರುವ ಆಡಿಯೋ ಕ್ಲಿಪಿಂಗ್ಸ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ನಡೆದ ಹಿಂದಿನ ದಿನ ಅಂದರೆ ಮೇ ಒಂದರಂದು  ಎರಡು ಜಿಲ್ಲೆಗಳ ಡ್ರಗ್ಸ್ ಕಂಟ್ರೋಲರ್ ನೋಡಲ್ ಅಧಿಕಾರಿಯಾಗಿದ್ದ ರವಿಕುಮಾರ್‍ರಿಗೆ ಮೊಬೈಲ್ ಕರೆ ಮಾಡಿ, ನನ್ನ ಅನುಮತಿ ಇಲ್ಲದೇ ಚಾಮರಾಜನಗರಕ್ಕೆ ಆಕ್ಸಿಜನ್ ಪೊರೈಕೆ ಮಾಡಬೇಡಿ ಎಂದು ಧಮ್ಕಿ ಹಾಕಿದ್ದಾರೆ. ಕೋವಿಡ್ ಆಸ್ಪತ್ರೆಗೆ ಮಾತ್ರ ನೀಡುತ್ತಿರುವುದು ಎಂದು ರವಿ ಪರಿಪರಿಯಾಗಿ ಜಿಲ್ಲಾಧಿಕಾರಿಯನ್ನು ಬೇಡಿಕೊಂಡಿದ್ದಾರೆ.

ಆದರೂ ಸಹ ನೀನು ಕಚೇರಿಗೆ ಕಡತಗಳನ್ನು ತೆಗೆದುಕೊಂಡು ಬಾ ಎನ್ನುವ ಜೊತೆಗೆ, ಉದ್ಧಟತನದಿಂದ ನಿನ್ನನ್ನು ಡಿಸ್ಮಿಸ್ ಮಾಡುತ್ತೇನೆಂದು ಬೆದರಿಸುವುದು ಸಹ  ದಾಖಲಾಗಿದೆ.   ಆಮ್ಲಜನಕ ಸರಬರಾಜು ಮಾಡುವ ಕೇಂದ್ರದಲ್ಲಿ ಅಲ್ಲಿನ ಸಿಬ್ಬಂದಿಗಳಿಗೆ ರೋಹಿನಿ ಸಿಂಧೂರಿಯು  ಅನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಚಾಮರಾಜನಗರಕ್ಕೆ ಕೊಡಲಾಗುವುದಿಲ್ಲ ಎಂದು ತಿರಸ್ಕರಿಸುವುದು ಆಡಿಯೋ ಕ್ಲಿಪ್ಪಿಂಗ್‍ನÀಲ್ಲಿ  ಬಹಿರಂಗಗೊಂಡಿದೆ ಎಂದು ಇಬ್ಬರ ನಡುವೆ ನಡೆದಿರುವ ಸಂಭಾಷಣೆಯ ತುಣುಕುಗಳನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿದರು.

ಚಾಮರಾಜನಗರ ಜಿಲ್ಲೆಯ ಬಗ್ಗೆ ತಾತ್ಸಾರವಾಗಿ ಮಾತನಾಡುವ ಜೊತೆಗೆ ಡಿಪ್ಯೋಟಿ ಡೈರೆಕ್ಟರ್  ರವಿಯನ್ನು ಬೆದರಿಸಿದ ಪರಿಣಾಮ ಅಂದು ನಮ್ಮ ಜಿಲ್ಲೆಗೆ ಬರಬೇಕಾಗಿದ್ದ  ಆಕ್ಸಿಜನ್ ಇಲ್ಲದೇ ನಮ್ಮ ಜಿಲ್ಲೆಯ 24ಕ್ಕು ಹೆಚ್ಚು ಕೋವಿಡ್  ರೋಗಿಗಳು ಸಾವಿಗೀಡಾಗಿರುವುದು ಸ್ಪಷ್ಟವಾಗಿದೆ. ಹೀಗಾಗಿ ಇಂಥ ಗುರುತರವಾದ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಿದರೆ ಸಾಕಾಗುವುದಿಲ್ಲ. ಆಕೆಯ ಮೇಲೆ ಕೊಲೆ ಮೊಕದ್ದಮೆ ಕೇಸನ್ನು ದಾಖಲಿಸಿ ಕರ್ತವ್ಯದಿಂದ ಅಮಾನತ್ತುಪಡಿಸಿದರೆ, ಜಿಲ್ಲೆಯ ಜನರಿಗೆ ನ್ಯಾಯ ದೊರಕುತ್ತದೆ  ಎಂದರು.

ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ಮಂದಿ ರೋಗಿಗಳು ದಾರುಣವಾಗಿ ಸಾವೀಗೀಡಾಗಲು ರೋಹಿಣಿ ಸಿಂಧೂರಿ ಅವರ ದುರಂಕಾರ, ಕರ್ತವ್ಯಲೋಪದ ಕಾರಣವಾಗಿದೆ. ರೋಹಿಣಿ ಸಿಂಧೂರಿ ಕರ್ತವ್ಯ ನಿರ್ವಹಿಸಿದ ಕಡೆ  ಇದೇ ರೀತಿಯ ಉದ್ಧಟತನ ತೋರಿ ದುರಂತಗಳನ್ನು ಸೃಷ್ಟಿಸುವುದರಲ್ಲಿ ಎತ್ತಿದ ಕೈ. ಮುಂದೆ ಯಾವುದೇ ಜವಾಬ್ದಾರಿ ಸ್ಥಾನಗಳಿಗೆ ರಾಜ್ಯ ಸರ್ಕಾರ ಈಕೆಯನ್ನು ವರ್ಗಾಯಿಸಬಾರದು. ಸಾಧ್ಯವಾದಲ್ಲಿ ಈಕೆಯನ್ನು ಕೇಂದ್ರ ಸರ್ಕಾರದ ಸೇವೆಗೆ ಕಳುಹಿಸಿ ಕೊಟ್ಟರೆ ರಾಜ್ಯದ ಜನತೆಗೆ ಉಪಕಾರ ಮಾಡಿದಂತಾಗುತ್ತದೆ ಎಂದರು.

ರಾಜ್ಯ ಸರ್ಕಾರ ಈಕೆಯ ಮೇಲೆ ಕೊಲೆ ಮೊಕದ್ದಮೆಯನ್ನು ದಾಖಲು ಮಾಡದಿದ್ದರೆ ಜಿಲ್ಲೆಯ ಜನತೆ ಪರವಾಗಿ ನಾನೇ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡುತ್ತೇನೆ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೂ ದೂರನ್ನು ನೀಡುತ್ತೇನೆ ಎಂದು ಮಲ್ಲೇಶ್ ತಿಳಿಸಿದರು. ರಾಜ್ಯ ಸರ್ಕಾರ ಈಗ ನೀಡಿರುವ 2 ಲಕ್ಷ ರೂ. ಪರಿಹಾರ ಕಡಿಮೆ. ಕನಿಷ್ಟ ಪಕ್ಷ ಈ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕೆಂದು ರೈತ ಮುಖಂಡ ಮಲ್ಲೇಶ್ ಸರ್ಕಾರವನ್ನು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: