ಮೈಸೂರು

ಡಾ.ರೇಖಾ ಶಿವಪ್ಪ ಅವರು ನೀಡಿದ 2 ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರ ಪಾಲಿಕೆಗೆ ಹಸ್ತಾಂತರಿಸಿದ ಶಾಸಕ ನಾಗೇಂದ್ರ

ಮೈಸೂರು,ಜೂ.7:- ಮೈಸೂರು ಗೋಕುಲಂ ಬಡಾವಣೆಯ ಅಂತರ ರಾಷ್ಟ್ರೀಯ ಯೂತ್ ಹಾಸ್ಟೆಲ್ ನಲ್ಲಿ ರಾಜ್ಯದಲ್ಲಿಯೇ ಮಾದರಿಯಾಗಿ ಚಾಮರಾಜ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಾರಂಭಿಸಿರುವ ಮಹಿಳಾ ಕೋವಿಡ್ ಕೇರ್ ಸೆಂಟರ್ ಗೆ   ಅರುಣ್ ಕುಮಾರ್, ಡೆವಲಪರ್, ಟಿ.ಕೆ. ಬಡಾವಣೆ, ಮೈಸೂರು ಇವರ  ಅಮೇರಿಕದಲ್ಲಿ ನೆಲೆಸಿರುವ ಸಹೋದರಿ ಡಾ.ರೇಖಾ ಶಿವಪ್ಪ ಅವರು  2 ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದು, ಹಸ್ತಾಂತರಿಸಲಾಯಿತು.

ಪ್ರಸ್ತುತ ಅಮೆರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ರೇಖಾ ಶಿವಪ್ಪ ಇವರು ಕೋವಿಡ್ ಸೋಂಕಿತರಿಗೆ ಸಹಾಯ ಮಾಡುವ ಉದ್ದೇಶದಿಂದ 2 ಉತ್ತಮ ದರ್ಜೆಯ 2 ಆಕ್ಸಿಜನ್ ಕಾನ್ಸಟ್ರೇಟರ್ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದನ್ನು  ಶಾಸಕರಾದ   ಎಲ್. ನಾಗೇಂದ್ರ ಅವರು ಹಾಗೂ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂ:21 ರ ಸದಸ್ಯರಾದ  ವೇದಾವತಿ ರವರೊಂದಿಗೆ ಕೋವಿಡ್ ಕೇರ್ ಸೆಂಟರ್ ನ ಉಸ್ತುವಾರಿ ಅಧಿಕಾರಿಯಾದ ವಲಯ ಕಚೇರಿ-4 ಸಹಾಯಕ ಆಯುಕ್ತರಾದ  ಪ್ರಿಯದರ್ಶಿನಿ ಅವರಿಗೆ ಹಸ್ತಾಂತರಿಸಿದರು.

ಈ ಸಮಯದಲ್ಲಿ ಮುಖಂಡರುಗಳಾದ ಶಿವಶಂಕರ್,ರಮೇಶ್, ಪುನೀತ್, ಆರೋಗ್ಯ ನಿರೀಕ್ಷಕ ಮುರುಗೇಶ್ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: