ಕರ್ನಾಟಕಪ್ರಮುಖ ಸುದ್ದಿ

ಬಿ.ಟಿ.ಹತ್ತಿಗೆ ಕಾಡುವ ಗುಲಾಬಿ ಕಾಯಿಕೊರಕದ ಹತೋಟಿಗೆ ಕೃಷಿ ಇಲಾಖೆ ತಿಳುವಳಿಕೆ

ಬೆಂಗಳೂರು: ಬಿ.ಟಿ. ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕದ ಹತೋಟಿಗೆ ಈ ಕೆಳಕಂಡಂತೆ ಪ್ರಮುಖ ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳಲು ಕೃಷಿ ಇಲಾಖೆ ರೈತರಲ್ಲಿ ಮನವಿ ಮಾಡಿದ್ದು ವಿವರ ಹೀಗಿದೆ.

ಜಮೀನು ನಿರ್ಮಲೀಕರಣ:
  • ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದು.  ತೆರೆಯದ ಮತ್ತು ಅರ್ಧ ತೆರೆದಿರುವ ಕಾಯಿಗಳನ್ನು ಹತ್ತಿ ಗಿಡದಿಂದ ಕಿತ್ತು ನಾಶಪಡಿಸುವುದು.
ಜಿನ್ ನಿರ್ಮಲೀಕರಣ:
  • ಜಿನ್ನಿಂಗ್ ಮಾಡಿದ ನಂತರ ಬಾಧೆಗೆ ತುತ್ತಾದ ಹತ್ತಿ ಬೀಜಗಳನ್ನು ನಾಶ ಮಾಡುವುದರಿಂದ ಈ ಬೀಜಗಳಲ್ಲಿ ಸುಪ್ತಾವಸ್ಥೆಯಲ್ಲಿರುವ ಮರಿಹುಳುಗಳನ್ನು ನಾಶಮಾಡಬಹುದಾಗಿರುತ್ತದೆ.  ಜಿನ್ನಿನಲ್ಲಿ ಲಿಂಗಾಕರ್ಷಕ ಬಲೆಗಳನ್ನು ಸ್ಥಾಪಿಸುವುದು ಸೂಕ್ತವಾಗಿರುತ್ತದೆ.
  • ಬಿತ್ತನೆ ಕಾಲಾವಧಿ ಬಹಳ ಮುಖ್ಯವಾಗಿರುವುದರಿಂದ ವಲಯವಾರು sowing window ಮಾಹಿತಿ ಪಡೆದು ಅದರಂತೆ ಬಿತ್ತನೆ ಮಾಡುವುದು.
  • ಬಿ.ಟಿ. ಹತ್ತಿಯ ಜೊತೆಗೆ ಬಿ.ಟಿ. ರಹಿತ ಹತ್ತಿಯನ್ನು ಆಶ್ರಯ ಬೆಳೆಯಾಗಿ ಬೆಳೆಯುವುದು.
  • ಜಮೀನಿನಲ್ಲಿ ಜೊತೆಗೆ ಬಿ.ಟಿ. ರಹಿತ ಹತ್ತಿಯನ್ನು ಆಶ್ರಯ ಬೆಳೆಯಾಗಿ ಬೆಳೆಯುವುದು.
  • ಜಮೀನಿನನಲ್ಲಿ ಲಿಂಗಾಕರ್ಷಕ ಬಲೆಗಳನ್ನು ಹೂ ಬಿಡುವ ಹಂತದಲ್ಲಿ ಉಪಯೋಗಿಸುವುದು. (20 ರಿಂದ 35 ಬಲೆಗಳು ಪ್ರತಿ ಹೆಕ್ಟೆರ್‍ಗೆ)
  • 100 ದಿನಗಳ ಕಡಿಮೆ ಇರುವ ಬೆಳೆಯಲ್ಲಿ ಹೂ ಬಿಡುವ ಹಂತದಲ್ಲಿ ಪ್ರೋಫೆನೋಫಾಸ್ ಕೀಟನಾಶಕವನ್ನು ಸಿಂಪಡಿಸುವುದರಿಂದ ಶೇ. 50 ರಷ್ಟು ನಷ್ಟವನ್ನು ಕಡಿಮೆಗೊಳಿಸಬಹುದಾಗಿದೆ.
  • 100 ದಿನಗಳಿಗಿಂತ ಹೆಚ್ಚಿನ ಕಾಲಾವಧಿಯಾಗಿರುವ ಬೆಳೆಯಲ್ಲಿ ಫೈರಾತ್ರೈಡ್ ಕೀಟನಾಶಕವನ್ನು ಸಿಂಪಡಿಸುವುದರಿಂದ ನಷ್ಟವನ್ನು ಕಡಿಮೆಗೊಳಿಸುತ್ತದೆ (ಲ್ಯಾಮ್‍ಡಾ/ಸೈಪರ್‍ಮೆತ್ರಿನ್ 0.5 ಎಂ.ಎಲ್. ಪ್ರತಿ ಲೀಟರ್‍ಗೆ)

(ಎನ್.ಬಿ.ಎನ್)

Leave a Reply

comments

Related Articles

error: