ನಮ್ಮೂರುಮನರಂಜನೆಮೈಸೂರು

ಅಕ್ಟೋಬರ್ 1: ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು

ಅ. 1, ಶನಿವಾರದಂದು ಸಂಜೆ 6 ಗಂಟೆಗೆ  ಆರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಉಪಸಭಾಪತಿ ಮರಿತಿಬ್ಬೇಗೌಡ, ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಸಚಿವರಾದ ಹೆಚ್.ಎಸ್. ಮಹದೇವಪ್ರಸಾದ್, ತನ್ವೀರ್ ಸೇಠ್, ಉಮಾಶ್ರೀ ಹಾಗೂ ಶಾಸಕ ಎಂ.ಕೆ. ಸೋಮಶೇಖರ್ ಉಪಸ್ಥಿತರಿರುವರು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ 6:30ಕ್ಕೆ ನೃತ್ಯರೂಪಕ -‘ಜೀವ ಜಲ’ ರೂಪಾ ರಾಜೇಶ್ ಮತ್ತು ತಂಡ, ಬೆಂಗಳೂರು. ಸಂಗೀತ ಸಂಯೋಜನೆ ಸುನೀತಾ ಚಂದ್ರಕುಮಾರ್ ಇವರಿಂದ.

ಸಂಜೆ 7:35ಕ್ಕೆ ಹಿನ್ನಲೆ ಗಾಯಕಿ ಚೈತ್ರಾ ಮತ್ತು ತಂಡದಿಂದ ಸಂಗೀತ ವೈವಿಧ್ಯ.

ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5:30ಕ್ಕೆ ಶ್ರೀನಿವಾಸ ವಿ.ಎಸ್. ಮತ್ತು ತಂಡದವರಿಂದ ಸ್ಯಾಕ್ಸೋಫೋನ್, 6ಕ್ಕೆ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ಭರತನಾಟ್ಯ, ಸಂಜೆ 7ಕ್ಕೆ ಡಾ. ಸಿ.ಎ. ಶ್ರೀಧರ ಮತ್ತು ತಂಡದವರಿದ ಕೊಳಲು ವಾದನ, 8ಕ್ಕೆ ಬೆಂಗಳೂರಿನ ಡಾ. ಸಂಪದಾಭಟ್ ಮರಬಳ್ಳಿ  ಹಿಂದೂಸ್ತಾನಿ ಸಂಗೀತ.

ಕಲಾಮಂದಿರ ವೇದಿಕೆ: ಸಂಜೆ 5:30ಕ್ಕೆ ಮಂಡ್ಯದ ಎಂ.ಎಸ್. ಆನಂದ ಮೆಲುಕೋಟೆ ಇವರಿಂದ ನಾದಸ್ವರ, 6ಕ್ಕೆ ಮಹಾರಾಷ್ಟ್ರ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರದ ಲಾವಣಿ, ಸಂಜೆ 7ಕ್ಕೆ ಮೈಸೂರಿನ ಕವಿತಾ ಕಾಮತ್ ಅವರಿಂದ ಸುಗಮ ಸಂಗೀತ ಹಾಗೂ 8 ರಿಂದ ಬೆಂಗಳೂರಿನ ವಿಜಯ್ ಕುಮಾರ್ ಮೈಕೋ ಮತ್ತು ತಂಡದಿಂದ ಭರತನಾಟ್ಯ.

ಗಾನಭಾರತಿ ವೇದಿಕೆ (ವೀಣೆ ಶೇಷಣ್ಣ ಭವನ): ಸಂಜೆ 5:30ಕ್ಕೆ ಬೀದರ್ ನ ಬದ್ರಿನಾಥ ಮುಡಬಿ ಮತ್ತು ತಂಡದಿಂದ ಪಿಟೀಲು ವಾದನ, 6ಕ್ಕೆ ತೆಲಂಗಾಣ ದಕ್ಷಿಣ ವಲಯದ ಸಾಂಸ್ಕೃತಿಕ ಕೇಂದ್ರದ ಬಧುಕಂ ನೃತ್ಯ ಮತ್ತು ಸಂಜೆ 7ಕ್ಕೆ ಬೆಂಗಳೂರಿನ ಚಿಗುರು ತಂಡದಿಂದ ಸಮೂಹ ನೃತ್ಯ.

ಚಿಕ್ಕ ಗಡಿಯಾರ ವೇದಿಕೆ : ಸಂಜೆ 5:30ಕ್ಕೆ ನಂಜನಗೂಡಿನ ನಾರಾಯಣ ಮತ್ತು ತಂಡ ಕಳಲೆಯಿಂದ ಮರಗಾಲು ಕಂಸಾಳೆ, 6 ರಿಂದ ಒಡಿಸ್ಸಾ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರದಿಂದ ಒಡಿಸ್ಸಾ ರಣಪ್ಪಾ ನೃತ್ಯ, ಸಂಜೆ 7ಕ್ಕೆ ಹುಣಸೂರಿನ ಬಿ.ಕೆ.ಚಿಕ್ಕಣ್ಣ ಮತ್ತು ತಂಡದಿಂದ ಸುಗ್ಗಿ ಕುಣಿತ.

ಪುರಭವನ ವೇದಿಕೆ : ಸಂಜೆ 7ಕ್ಕೆ ನಂಜನಗೂಡಿನ ವಿಶ್ವಮೂರ್ತಿ ಮತ್ತು ತಂಡ ಹೆಮ್ಮರಗಾಲ ಇವರಿಂದ ಪೌರಾಣಿಕ ನಾಟಕ -ದಕ್ಷಯಜ್ಞ,

Leave a Reply

comments

Related Articles

error: