ಮೈಸೂರು

68ರ ವಯೋಮಾನದ ವ್ಯಕ್ತಿಗೆ ಪೇಸ್ ಮೇಕರ್ ಅಳವಡಿಕೆ : ಬಿಜಿಎಸ್ ವೈದ್ಯರ ಸಾಧನೆ

ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆ ನಗರ ಮತ್ತು ರಾಜ್ಯದಲ್ಲಿ ಜಗತ್ತಿನ ಅತ್ಯಂತ ಚಿಕ್ಕ ಗಾತ್ರದ ಪೇಸ್ ಮೇಕರ್ ನ್ನು 68ವರ್ಷ ವಯಸ್ಸಿನ ಬ್ರಾಡಿಕಾರ್ಡಿಯಾ ರೋಗಿಯೊಳಗೆ ಅಳವಡಿಸಿದ ಮೊದಲ ಆಸ್ಪತ್ರೆ ಎಂಬ ಗೌರವಕ್ಕೆ ಪಾತ್ರವಾಗಿದೆ ಎಂದು ಆಸ್ಪತ್ರೆಯ ಡಾ.ಅರುಣ್ ತಿಳಿಸಿದರು.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೆಡ್ ರಹಿತ ಪೇಸ್ ಮೇಕರ್ ಆಗಿದ್ದು ಯುಎಸ್ ಆಹಾರ ಮತ್ತು ಔಷಧ ಆಡಳಿತ ಮಂಡಳಿಯಿಂದ ಒಪ್ಪಿಗೆ ಪಡೆದಿದೆ. ನೂತನ ರೀತಿಯ ಉಪಕರಣವಾಗಿದ್ದು, ಅತ್ಯುನ್ನತ ಪೇಸಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಸಾಂಪ್ರದಾಯಿಕ ಪೇಸ್ ಮೇಕರ್ ಗಿಂತ ಹತ್ತು ಪಟ್ಟು ಕಡಿಮೆ ಗಾತ್ರ ಹೊಂದಿದೆ. ರಾಜ್ಯದಲ್ಲಿ ಈ ಮೊದಲ ಅಳವಡಿಕೆಯನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯ ಹೃದಯರೋಗ ವಿಭಾಗದ ಮುಖ್ಯಸ್ಥರು ಮತ್ತು ಹೃದಯ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ಅರುಣ್ ಶ್ರೀನಿವಾಸ್, ಡಾ.ಗುರುಪ್ರಸಾದ್ ಎಚ್.ಪಿ, ಡಾ.ಪಿ.ಜಯಕುಮಾರ್, ಡಾ.ಆದಿತ್ಯ ಉಡುಪ ಯಶಸ್ವಿಯಾಗಿ ನೆರವೇರಿಸಿದ್ದಾರೆ ಎಂದರು.

Leave a Reply

comments

Related Articles

error: